ಹೆಚ್ಚು ಜನರು ಇಷ್ಟಪಡುವ ಸ್ವೀಟ್ಕಾರ್ನ್ ಅಥವಾ ಸಿಹಿ ಜೋಳವನ್ನು ಪೌಷ್ಟಿಕಾಂಶದಿಂದ ಕೂಡಿದ ಆಹಾರವೆಂದು ಪರಿಗಣಿಸಲಾಗುತ್ತದೆ. ಮಕ್ಕಳು, ವಯಸ್ಕರು ಎಲ್ಲರು ಈ ಜೋಳವನ್ನು ಇಷ್ಟ ಪಟ್ಟು ತಿಂತಾರೆ. ಆದರೆ, ಪ್ರತಿದಿನ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸ್ವೀಟ್ಕಾರ್ನ್ ಸೇವಿಸಿದರೆ ಕೆಲ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಸ್ವೀಟ್ ಕಾರ್ನ್ ತಿಂದರೆ ಹೊಟ್ಟೆ ಬೇಗ ತುಂಬುತ್ತದೆ, ಹಾಗಾಗಿ ಇದನ್ನು ಆಹಾರದಲ್ಲಿ ಅತಿಯಾಗಿ ಸೇವಿಸಿದರೆ ದೇಹದಲ್ಲಿ ಅಗತ್ಯ ಖನಿಜಗಳು ಮತ್ತು ವಿಟಮಿನ್ ಗಳ ಕೊರತೆ ಉಂಟಾಗಬಹುದು. ಇದರಿಂದ ಪೆಲ್ಲಾಗ್ರಾ ಎಂಬ ಕಾಯಿಲೆ ಬರುವ ಸಾಧ್ಯತೆ ಇದೆ. ಇದು ವಿಟಮಿನ್ ಬಿ3 ಕೊರತೆಯಿಂದ ಉಂಟಾಗುವ ತೊಂದರೆ. ಇದರ ಜತೆಗೆ ಇನ್ನೂ ಹಲವು ಆರೋಗ್ಯ ತೊಂದರೆಗಳು ಉಂಟಾಗಬಹುದು.
ಸಿಹಿ ಜೋಳದಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚು ಇರುವ ಕಾರಣ, ಇದು ರಕ್ತದ ಸಕ್ಕರೆಯ ಮಟ್ಟವನ್ನು ಹೆಚ್ಚಿಸಬಹುದು. ವಿಶೇಷವಾಗಿ ಮಧುಮೇಹ ಹೊಂದಿರುವವರು ಅಥವಾ ಅದರ ಅಪಾಯ ಹೊಂದಿರುವವರು ಈ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಅಥವಾ ವೈದ್ಯರ ಸಲಹೆಯೊಂದಿಗೆ ಮಾತ್ರ ಸೇವಿಸಬೇಕು.
ಹೆಚ್ಚು ಪ್ರಮಾಣದಲ್ಲಿ ಜೋಳ ಸೇವಿಸಿದರೆ ಹೊಟ್ಟೆಯಲ್ಲಿ ಅನಿಲ, ಉಬ್ಬರ, ಗ್ಯಾಸ್ ಸಮಸ್ಯೆಗಳು ಉಂಟಾಗಬಹುದು. ಜೋಳದಲ್ಲಿರುವ ನಾರು ಅಂಶ ಜೀರ್ಣಾಂಗ ವ್ಯವಸ್ಥೆಗೆ ಒತ್ತಡ ಉಂಟುಮಾಡಿ ಅಜೀರ್ಣ, ಹೊಟ್ಟೆನೋವು, ವಾಯು ಸಮಸ್ಯೆಗಳನ್ನು ಹುಟ್ಟುಹಾಕಬಹುದು. ಕಡಿಮೆ ನೀರು ಕುಡಿಯುವವರಲ್ಲಿ ಮಲಬದ್ಧತೆಯ ಅಪಾಯವೂ ಇದೆ.
ಇನ್ನೊಂದೆಡೆ, ಸ್ವೀಟ್ಕಾರ್ನ್ನ ತೀವ್ರ ಸಿಹಿಗೆ ಸಂಬಂಧಿಸಿದಂತೆ ಕೆಲವು ಜನರಲ್ಲಿ ಹಲ್ಲಿನ ಮೇಲೆ ಪರಿಣಾಮವಾಗಬಹುದು. ತಿನ್ನಿದ ನಂತರ ಹಲ್ಲುಗಳನ್ನು ಸ್ವಚ್ಛಗೊಳಿಸದೆ ಇದ್ದರೆ ಹಲ್ಲು ನೋವು, ಇನ್ಫೆಕ್ಷನ್ ಮುಂತಾದ ತೊಂದರೆಗಳು ತಲೆದೋರಬಹುದು.
ಕಳೆದ ಕೆಲವು ಸಂದರ್ಭಗಳಲ್ಲಿ, ಸ್ವೀಟ್ಕಾರ್ನ್ ಸೇವನೆಯ ಬಳಿಕ ಚರ್ಮದ ಮೇಲೆ ತುರಿಕೆ, ದದ್ದು, ತಲೆನೋವು, ವಾಕರಿಕೆ ಮತ್ತು ತಲೆತಿರುಗುವಿಕೆ ಮುಂತಾದ ಅಲರ್ಜಿ ಲಕ್ಷಣಗಳು ಕಂಡುಬಂದಿವೆ.
ಆದ್ದರಿಂದ, ಸ್ವೀಟ್ಕಾರ್ನ್ ಆರೋಗ್ಯಕರ ಆಹಾರವಾದರೂ ಸಹ, ಅದರ ಸೇವನೆಗೆ ಪ್ರಮಾಣತೀತ ನಿಯಂತ್ರಣ ಅಗತ್ಯವಿದೆ ಎಂಬುದನ್ನು ವೈದ್ಯರು ಸಲಹೆ ನೀಡುತ್ತಾರೆ.