March 25, 2026
Wednesday, March 25, 2026
spot_img

Health | ದೋಸೆ ‘ಕ್ರೇಜ್’ ಜಾಸ್ತಿಯಾದ್ರೆ ಬಾಡಿ ‘ಡ್ಯಾಮೇಜ್’ ಫಿಕ್ಸ್: ಅತಿಯಾದ ದೋಸೆ ಪ್ರೇಮಕ್ಕೆ ಬ್ರೇಕ್ ಹಾಕಿ

ಬೆಂಗಳೂರು ಮಂದಿಗೆ ದೋಸೆ ಅಂದ್ರೆ ಒಂಥರಾ ಪ್ರಾಣ. ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ದೋಸೆ ತಿನ್ನೋ ಮಜಾನೇ ಬೇರೆ. ಆದ್ರೆ ಕೆಲವರು ಈ ಕ್ರೇಜ್‌ನಿಂದಾಗಿ ಮಧ್ಯಾಹ್ನ, ರಾತ್ರಿ ಕೂಡ ದೋಸೆಯನ್ನೇ ತಿಂತಾರೆ. ಹೀಗೆ ಮಾಡೋದ್ರಿಂದ ನಿಮ್ಮ ಆರೋಗ್ಯಕ್ಕೆ “ಖಾಲಿ ದೋಸೆ” ಗಿಂತ ದೊಡ್ಡ ಪೆಟ್ಟು ಬೀಳಬಹುದು!

ದೋಸೆ ಹಿಟ್ಟಿನಲ್ಲಿ ಅಕ್ಕಿ ಅಂಶ ಹೆಚ್ಚಿರುತ್ತೆ. ಮೂರೂ ಹೊತ್ತು ಇದನ್ನೇ ತಿಂದ್ರೆ ರಕ್ತದಲ್ಲಿ ಸಕ್ಕರೆ ಅಂಶ ದಿಡೀರ್ ಏರಿಕೆಯಾಗಬಹುದು.

ದೋಸೆಗೆ ಎಣ್ಣೆ ಅಥವಾ ಬೆಣ್ಣೆ ಹಾಕದಿದ್ರೆ ರುಚಿ ಇರಲ್ಲ. ಆದ್ರೆ ಪದೇ ಪದೇ ಎಣ್ಣೆ ಸವರಿ ದೋಸೆ ತಿಂದ್ರೆ ಹೊಟ್ಟೆ ಸುತ್ತ “ಟೈರ್” ಬರೋದು ಗ್ಯಾರಂಟಿ.

ಬರೀ ಅಕ್ಕಿ-ಉದ್ದಿನ ಬೇಳೆ ತಿಂದ್ರೆ ದೇಹಕ್ಕೆ ಬೇಕಾದ ಪ್ರೋಟೀನ್, ವಿಟಮಿನ್ ಮತ್ತು ಫೈಬರ್ ಸರಿಯಾಗಿ ಸಿಗಲ್ಲ. ಇದರಿಂದ ಬೇಗ ಸುಸ್ತಾಗೋದು ಅಥವಾ ಜೀರ್ಣಕ್ರಿಯೆ ತೊಂದರೆ ಆಗಬಹುದು.

ಹುದುಗು ಬಂದ (Fermented) ಹಿಟ್ಟನ್ನ ಅತಿಯಾಗಿ ತಿಂದ್ರೆ ಕೆಲವರಿಗೆ ಗ್ಯಾಸ್ಟ್ರಿಕ್ ಅಥವಾ ಎದೆಯುರಿ ಕಾಣಿಸಿಕೊಳ್ಳಬಹುದು.

ದೋಸೆ ತಿನ್ನಿ, ಆದ್ರೆ ಜೊತೆಗೆ ತರಕಾರಿ ಸಾಗು ಬಳಸಿ ಅಥವಾ ರಾಗಿ ದೋಸೆ, ಗೋಧಿ ದೋಸೆಯಂತಹ ವೆರೈಟಿ ದೋಸೆ ಟ್ರೈ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !