ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಚಹಾ ಕುಡಿಯದೆ ದಿನವೇ ಶುರುವಾಗಲ್ಲ ಅನ್ನೋರು ತುಂಬಾ ಜನ ಇದ್ದಾರೆ. ಆದರೆ ಸಾಮಾನ್ಯ ಟೀಗೆ ಬದಲಾಗಿ ತುಳಸಿ ಚಹಾ (Tulsi Tea) ಕುಡಿಯುವ ಅಭ್ಯಾಸ ಮಾಡಿದ್ರೆ, ಅದು ಕೇವಲ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ತುಂಬಾ ಲಾಭ ನೀಡುತ್ತೆ. ಮನೆಯಂಗಳದಲ್ಲೇ ಬೆಳೆದಿರುವ ಈ ಸಣ್ಣ ಸಸ್ಯದಲ್ಲಿದೆ ಅನೇಕ ಔಷಧೀಯ ಗುಣಗಳಿವೆ.
- ತುಳಸಿ ಚಹಾ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ, ಕೆಮ್ಮು ಅಥವಾ ಗಂಟಲಿನ ನೋವಿದ್ದರೆ ತುಳಸಿ ಚಹಾ ಅತ್ಯುತ್ತಮ ಔಷಧದಂತೆ ಕೆಲಸ ಮಾಡುತ್ತದೆ.
- ಇದು ದೇಹದಿಂದ ವಿಷಕಾರಕ ಅಂಶಗಳನ್ನು ಹೊರಹಾಕಿ ಯಕೃತ್ ಶುದ್ಧಿಕರಣಕ್ಕೆ ಸಹಾಯ ಮಾಡುತ್ತದೆ.
- ತುಳಸಿ ಚಹಾ ದೇಹದ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ.
- ಈ ಚಹಾ ರಕ್ತದ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಡಯಾಬಿಟಿಸ್‌ನವರಿಗೆ ಇದು ಹೇಳಿ ಮಾಡಿಸಿದ್ದು.
- ತುಳಸಿಯಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಚರ್ಮದ ಹೊಳಪನ್ನು ಕಾಪಾಡುತ್ತವೆ ಮತ್ತು ವಯಸ್ಸಿನ ಲಕ್ಷಣಗಳನ್ನು ತಡೆಗಟ್ಟುತ್ತವೆ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)