ಹಳೆಯ ಕಾಲದಿಂದಲೂ ನಮ್ಮ ಪುರಾತನ ಆಯುರ್ವೇದ ಪದ್ಧತಿಯಲ್ಲಿ ತಾಮ್ರದ ಪಾತ್ರೆಯಲ್ಲಿ ನೀರು ಸಂಗ್ರಹಿಸಿ ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಲಾಭದಾಯಕ ಎಂದು ಪರಿಗಣಿಸಲಾಗುತ್ತಿದೆ. ತಾಮ್ರದ ಪಾತ್ರೆಯು ನೈಸರ್ಗಿಕ ಶುದ್ಧೀಕರಣದ ಗುಣ ಹೊಂದಿದ್ದು, ದೇಹದ ವಿವಿಧ ಅಂಗಾಂಗಗಳ ಆರೋಗ್ಯವನ್ನು ಕಾಪಾಡಲು ಸಹಾಯಮಾಡುತ್ತದೆ.
ದೇಹದಿಂದ ವಿಷಕಾರಿ ದ್ರವ್ಯಗಳ ನಿವಾರಣೆ (Detoxification):
ತಾಮ್ರದಲ್ಲಿ ನೀರನ್ನು 6-8 ಗಂಟೆಗಳವರೆಗೆ ಇತ್ತು ಅದನ್ನು ಕುಡಿದರೆಅದು ನೈಸರ್ಗಿಕ ರೀತಿಯಲ್ಲಿ ನೀರನ್ನು ಶುದ್ಧೀಕರಿಸಿ, ದೇಹದಲ್ಲಿನ ವಿಷಕಾರಕ ತತ್ವಗಳನ್ನು ಹೊರಗೆ ಹಾಕುತ್ತದೆ.
ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ:
ತಾಮ್ರದ ನೀರು ಜೀರ್ಣಕ್ರಿಯೆಗೆ ಸಹಾಯಕವಾಗಿರುವ ಬ್ಯಾಕ್ಟೀರಿಯಾಗಳನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ಬಾಯಿನಲ್ಲಿ ಲಾಲಾರಸದ ಉತ್ಪತ್ತಿ ಹೆಚ್ಚಾಗಿ ಆಹಾರ ಜೀರ್ಣವಾಗುತ್ತದೆ.
ತ್ವಚೆಗೆ ಉತ್ತಮ ಆರೈಕೆ ನೀಡುತ್ತದೆ:
ತಾಮ್ರದ ನೀರು ಆಂಟಿಆಕ್ಸಿಡೆಂಟ್‌ಗಳಿಂದ ಕೂಡಿದ್ದು, ಚರ್ಮದ ಆರೋಗ್ಯವನ್ನು ಕಾಪಾಡಿ, ಮುಖದ ಮೆರುಗು ಮತ್ತು ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:
ತಾಮ್ರದ ಪಾತ್ರೆಯಲ್ಲಿ ಇರುವ ಜೈವಿಕ ಗುಣಗಳಿಂದ ವಿಟಮಿನ್ C, ಐರನ್‌ಗಳ ಪೋಷಣೆಗೆ ಸಹಕಾರಿಯಾಗುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ.
ಹೃದಯ ಆರೋಗ್ಯ ಸುಧಾರಣೆಗೆ ಸಹಕಾರಿ:
ತಾಮ್ರದ ನೀರು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತಿದ್ದು, ಹೃದಯದ ರಕ್ತಸಂಚಾರ ವ್ಯವಸ್ಥೆಯನ್ನು ಸಮತೋಲನದಲ್ಲಿಡಲು ಸಹಕಾರಿಯಾಗುತ್ತದೆ.
ದಿನಕ್ಕೆ ಒಂದೆರಡು ಗ್ಲಾಸ್ ತಾಮ್ರದ ಪಾತ್ರೆಯ ನೀರು ಸೇವನೆಯಿಂದ ದೇಹವನ್ನು ಶುದ್ಧೀಕರಿಸಿ, ಆರೋಗ್ಯವನ್ನು ವೃದ್ಧಿಸಿಕೊಳ್ಳಿ!