Monday, December 29, 2025

Health | ಪ್ರತಿದಿನ ಅರ್ಧ ಕಪ್ ಮೊಸರು ತಿಂದರೆ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೆಲವೊಬ್ಬರಿಗೆ ಮೊಸರೆಂದರೆ ಪಂಚಪ್ರಾಣ. ತಿಂಡಿಗೂ ಮೊಸರು, ಊಟಕ್ಕೂ ಮೊಸರು ಬೇಕೇ ಬೇಕು. ಇನ್ನು ಕೆಲವರು ಮೊಸರಿಗೆ ಸಕ್ಕರೆ ಬೆರೆಸಿ ತಿನ್ನುತ್ತಾರೆ. ಎಳೆಯರಾದಿಯಾಗಿ ವೃದ್ಧರ ವರೆಗೂ ಹೆಚ್ಚಿನ ಮಂದಿ ಮೊಸರನ್ನು ಇಷ್ಟ ಪಡುತ್ತಾರೆ.

ಮೊಸರಿನಲ್ಲಿ ಪ್ರೋ-ಬಯಾಟಿಕ್ ಹೇರಳವಾಗಿದೆ. ಇದು ಒಂದು ರೀತಿಯ ಆರೋಗ್ಯವಂತ ಬ್ಯಾಕ್ಟೀರಿಯಾ. ಕರುಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

ಕ್ಯಾಲ್ಸಿಯಂ, ಮೆಗ್ನೀಸಿಯಮ್, ವಿಟಮಿನ್ ಬಿ ೧೨ ನಂತಹ ಪೋಷಕಾಂಶಗಳು ಮೊಸರಿನಲ್ಲಿ ಹೇರಳವಾಗಿದೆ. ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಹಕಾರಿ.

error: Content is protected !!