ಬೆಂಡೆಕಾಯಿ ಅಥವಾ ಓಕ್ರಾ ನಮ್ಮ ಭಾರತೀಯ ಅಡುಗೆ ಮನೆಯಲ್ಲಿನ ಸಾಮಾನ್ಯ ತರಕಾರಿಗಳಲ್ಲಿ ಒಂದಾಗಿದೆ. ಇದನ್ನು ವಿವಿಧ ಆಹಾರಗಳಲ್ಲಿ ಬಳಸಲಾಗುತ್ತದೆ – ಸಾರು, ಪಲ್ಯ ಅಥವಾ ಸಾಂಬಾರ್ ಗಳಲ್ಲಿ ಬಾಲಸುತ್ತಾರೆ. ಕೇವಲ ರುಚಿಗೆ ಮಾತ್ರವಲ್ಲ ಇದರ ಅರೋಗ್ಯ ಪ್ರಯೋಜನಗಳು ಅಷ್ಟೇ ಇವೆ.
ಜೀರ್ಣಕ್ರಿಯೆಗೆ ಸಹಾಯ:
ಬೆಂಡೆಕಾಯಿಯಲ್ಲಿ ಇರುವ ಫೈಬರ್ ಆಹಾರಪದಾರ್ಥ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಇದು ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಮಲಬದ್ದತೆ ಸಮಸ್ಯೆಯನ್ನು (constipation) ನಿವಾರಿಸುತ್ತದೆ.
ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣ:
ಬೆಂಡೆಕಾಯಿಯಲ್ಲಿರುವ ಪ್ಲಾಂಟ್ ಸ್ಟಿಕ್ಕಿ ಫೈಬರ್ ಮತ್ತು ಪ್ಯಾಕ್ಟಿನ್ ಗುಣಗಳು ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಧಾನಗೊಳಿಸುತ್ತವೆ. ಇದು ಡಯಾಬಿಟಿಸ್ ರೋಗಿಗಳಿಗೆ ತುಂಬಾ ಉಪಯುಕ್ತ.
ಹೃದಯ ಆರೋಗ್ಯಕ್ಕಾಗಿ:
ಇದರಲ್ಲಿನ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್ಸ್ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಕೋಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದು ಮೂಲಕ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕದ ನಿಯಂತ್ರಣಕ್ಕೆ ಉಪಯುಕ್ತ:
ಬೆಂಡೆಕಾಯಿಯು ಕಡಿಮೆ ಕ್ಯಾಲೊರಿ ಹಾಗೂ ಹೆಚ್ಚಿನ ಫೈಬರ್ ಅನ್ನು ಹೊಂದಿರುವುದರಿಂದ ಇದು ತೂಕ ಕಡಿಮೆ ಮಾಡಲು ಸಹಾಯಕ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಇಮ್ಯೂನ್ ಸಿಸ್ಟಮ್ ಬಲಪಡಿಸುತ್ತದೆ:
ವಿಟಮಿನ್ C, A ಮತ್ತು ಹಲವಾರು ಮಿನರಲ್ಸ್ ಗಳನ್ನು ಹೊಂದಿರುವ ಬೆಂಡೆಕಾಯಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶರೀರವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ಬೆಂಡೆಕಾಯಿ ನಿತ್ಯ ಆಹಾರದಲ್ಲಿ ಸೇರಿಸಿಕೊಂಡರೆ ನಮ್ಮ ದೈನಂದಿನ ಆರೋಗ್ಯ ಉತ್ತಮವಾಗಿರಬಹುದು. ಇದು ಸುಲಭವಾಗಿ ಲಭ್ಯವಿರುವ ಹಾಗೂ ಪಾಕವಿಧಾನಗಳಿಗೆ ಸರಳವಾಗಿ ಸೇರಿಸಬಹುದಾದ ತರಕಾರಿ. ಆದ್ದರಿಂದ, ನಿಮ್ಮ ಆಹಾರ ಪಟ್ಟಿ ಒಳಗೊಂಡೂ ಬೆಂಡೆಕಾಯಿಗೆ ಒಂದು ಸ್ಥಾನ ಕೊಡಿ!