ಉತ್ತಮ ನೈರ್ಮಲ್ಯ, ಆರೋಗ್ಯಕ್ಕೆ ಮುಖ್ಯ ಬುನಾದಿ. ಒಟ್ಟಾರೆ ಆರೋಗ್ಯದ ಮೂಲಾಧಾರ. ಕೇವಲ ನಾವು ಮಾತ್ರ ಚೆನ್ನಾಗಿದ್ದರೆ ಸಾಲದು, ನಮ್ಮ ಮನೆ, ಸ್ನಾನಗೃಹದ ಸ್ವಚ್ಛತೆಯು ಬಹಳ ಮುಖ್ಯ.
ಇವತ್ತು ಕೆಲವು ವಸ್ತುಗಳನ್ನು ನಾವು ಅವುಗಳ ಜೀವಿತಾವಧಿಗಿಂತ ಹೆಚ್ಚು ಸಮಯ ಉಪಯೋಗಿಸಿದರೆ ಆರೋಗ್ಯಕ್ಕೆ ಹಾನಿಯಾಗೋದು ಖಂಡಿತ. ಅದು ಯಾವ ವಸ್ತು? ತಿಳಿದುಕೊಳ್ಳೋಣ ಬನ್ನಿ.
ಹಲ್ಲುಜ್ಜುವ ಬ್ರಷ್‌ಗಳು: ಹಲವಾರು ಮೂರು ತಿಂಗಳಿಗಿಂತ ಹೆಚ್ಚು ಕಾಲ ಒಂದೇ ಬ್ರಶ್ ಬಳಸುತ್ತಾರೆ. ಇದು ನಮ್ಮ ಬಾಯಿಯ ಆರೋಗ್ಯಕ್ಕೆ ಮಾರಕವಾಗಿದೆ. ಇದು ಬಾಯಿಯ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಬ್ರಷ್ ಮೂರರಿಂದ ನಾಲ್ಕು ತಿಂಗಳಿಗಿಂತ ಹಳೆಯದಾಗಿದ್ದರೆ, ಅದನ್ನು ಎಸೆಯಬೇಕು.
ಹಳೆಯ ರೇಜರ್ ಬ್ಲೇಡ್‌ಗಳು: ಹಳೆಯ ರೇಜರ್ ಬ್ಲೇಡ್‌ಗಳು 10 ಪಟ್ಟು ಹೆಚ್ಚು ಚರ್ಮದ ಸೋಂಕನ್ನು ಉಂಟುಮಾಡುತ್ತವೆ. ನಯವಾದ, ಸುರಕ್ಷಿತ ಶೇವಿಂಗ್‍ಗಾಗಿ ಐದರಿಂದ ಏಳು ಬಳಕೆಯ ನಂತರ ರೇಜರ್ ಬ್ಲೇಡ್‌ಗಳನ್ನು ಬದಲಾಯಿಸಬೇಕು.
ಮೌತ್‌ವಾಶ್: ಹಳೆಯ ಮೌತ್‌ವಾಶ್‌ಗಳು ಬಾಯಿಯಲ್ಲಿರುವ ಬ್ಯಾಕ್ಟೀರಿಯಾದ ನೈಸರ್ಗಿಕ ಸಮತೋಲನವನ್ನು ವಾಸ್ತವವಾಗಿ ಅಡ್ಡಿಪಡಿಸಬಹುದು. ಮೌತ್‌ವಾಶ್ ಬಾಯಿಯಲ್ಲಿರುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿಗೆ ಹಾನಿ ಮಾಡುತ್ತದೆ, ಇದು ಕರುಳಿನ ಸೂಕ್ಷ್ಮಜೀವಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.