HEALTH | ಈ ಲಕ್ಷಣಗಳು ನಿಮ್ಮಲ್ಲಿದ್ರೆ ಖಂಡಿತ ಕಡೆಗಣಿಸಬೇಡಿ! ಹುಷಾರ್

ಮಾನವನ ದೇಹದಲ್ಲಿ ಕಿಡ್ನಿಗಳು ಶುದ್ಧೀಕರಣದ ಮುಖ್ಯ ಅಂಗಗಳಾಗಿವೆ. ಈ ಕಿಡ್ನಿಗಳಲ್ಲಿ ಕೆಲವೊಮ್ಮೆ ಮೂತ್ರದಲ್ಲಿರುವ ಖನಿಜಗಳು ಹಾಗೂ ಆಮ್ಲಗಳು ಸೇರಿ ಕಲ್ಲುಗಳ ರೂಪದಲ್ಲಿ ಜಮೆಯಾಗುತ್ತವೆ. ಇದನ್ನು “ಕಿಡ್ನಿ ಸ್ಟೋನ್” ಅಥವಾ “ಮೂತ್ರಕೋಶ ಕಲ್ಲು” ಎಂದು ಕರೆಯಲಾಗುತ್ತದೆ. ಇದು ಸಣ್ಣದಾಗಿದ್ದರೆ ತಾನಾಗಿಯೇ ಹೊರಹೋಗಬಹುದು, ಆದರೆ ದೊಡ್ಡದಾದರೆ ಅತೀವ ನೋವು, ಸೋಂಕು ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.

ಇವತ್ತು ಮೂತ್ರಕೋಶದ ಕಲ್ಲು ಉಂಟಾದಾಗ ಎದುರಾಗುವ ಸಮಸ್ಯೆಗಳ ಕುರಿತು ತಿಳಿದುಕೊಳ್ಳೋಣ.

ಹಿಂಬದಿಯಲ್ಲಿ ತೀವ್ರವಾದ ನೋವು:
ಹಿಂಬದಿ ಅಥವಾ ಕೆಳಹೊಟ್ಟೆಯಲ್ಲಿರುವ ತೀವ್ರವಾದ ನೋವು ಈ ನೋವು ತಡೆಹಿಡಿಯಲಾಗದಷ್ಟು ತೀವ್ರವಾಗಿರಬಹುದು. ಹಾಗೂ ಒಂದೇ ಕಡೆ ನೋವು ಇಲ್ಲದೆ ದೇಹದ ಇತರ ಭಾಗಗಳಲ್ಲಿ ಚಲಿಸಬಹುದು.

ಮೂತ್ರ ವಿಸರ್ಜನೆಯಲ್ಲಿ ತೊಂದರೆ:
ಮೂತ್ರ ವಿಸರ್ಜಿಸುವಾಗ ಉರಿಯುವಿಕೆ ಅಥವಾ ತೀವ್ರವಾದ ನೋವು ಉಂಟಾಗುವುದು.

ಮೂತ್ರದಲ್ಲಿ ರಕ್ತ:
ಮೂತ್ರವು ಕೆಂಪು, ಬ್ರೌನ್ ಅಥವಾ ಗೋಧಿ ಬಣ್ಣದಲ್ಲಿರಬಹುದು. ಈ ರೀತಿ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಮೂತ್ರದ ದುರ್ಗಂಧ
ಮೂತ್ರಕೋಶ ಕಲ್ಲುಗಳಿಂದಾಗಿ ಮೂತ್ರದ ದುರ್ಗಂಧ ಹೆಚ್ಚಾಗಬಹುದು.

ಅಲಸ್ಯ, ಉಬ್ಬಸ
ದೇಹದಲ್ಲಿ ಶಕ್ತಿ ಕಡಿಮೆಯಾದಂತೆ ಭಾಸವಾಗುವುದು, ಆಹಾರ ಸೇವಿಸುವ ಆಸೆ ಕಡಿಮೆಯಾಗುವುದು, ಕೆಲವೊಮ್ಮೆ ಉಬ್ಬಸ ಕೂಡ ಕಾಣಿಸಬಹುದು.

ಜ್ವರ
ಸೋಂಕು ತಗುಲಿದರೆ, ಜ್ವರವು ಉಂಟಾಗಬಹುದು. ಇದು ತುರ್ತು ಚಿಕಿತ್ಸೆ ಅಗತ್ಯವಿರುವ ಸೂಚನೆಯಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!