ಜೀವನದಲ್ಲಿ ಎಲ್ಲದಕ್ಕಿಂತ ಯಾವುದು ಮುಖ್ಯ ಗೊತ್ತಾ? ಆರೋಗ್ಯ.
ಹೌದು, ಇದರಲ್ಲಿ ಯಾವುದೇ ಡಿಬೇಟ್ ಇಲ್ಲ, ಮಾತುಕತೆಯೂ ಇಲ್ಲ. ಆರೋಗ್ಯ ಚೆನ್ನಾಗಿದ್ದಾಗ ನೂರಾರು ಸಮಸ್ಯೆಗಳು ಕಾಣುತ್ತವೆ. ಅದೇ ಆರೋಗ್ಯ ಸರಿಯಿಲ್ಲದಾಗ ಬರೀ ಆರೋಗ್ಯ ಸರಿ ಮಾಡಿಕೊಳ್ಳುವುದೊಂದೇ ಗುರಿಯಾಗುತ್ತದೆ.
ಅನಾರೋಗ್ಯ ಸಮುಯದಲ್ಲಿ ಹೀಗೆ ಮೋಟಿವೇಟ್ ಮಾಡಿಕೊಳ್ಳಿ..
ಆರೋಗ್ಯ ಹೇಗೆ ಸರಿಮಾಡಿಕೊಳ್ಳಬಹುದು, ಮುಂದೆ ಇದು ಮತ್ತೆ ಬಾರದಂತೆ ನಾನೇನು ಮಾಡಬಹುದು ಯೋಚಿಸಿ..
ಸಣ್ಣ ವಿಷಯ, ಸಣ್ಣ ವಸ್ತುಗಳ ಮೇಲೆ ಗಮನ ಹರಿಸಿ. ನಿಮ್ಮ ಜೀವನದಲ್ಲಿ ಸಣ್ಣ ವಿಷಯಗಳಿಗೂ ಬೆಲೆ ಕೊಡಬೇಕು ಎಂದು ಪಾಠ ಕಲಿಯಿರಿ.
ಬೇರೆಯವರು ನಿಮ್ಮನ್ನು ನೋಡಿಕೊಳ್ಳುವಾಗ ಅವರಿಗೆ ನೀವು ಬರ್ಡನ್ ಆಗಿದ್ದೀನಿ ಎಂದುಕೊಳ್ಳಬೇಡಿ. ಅವರು ಇಷ್ಟಪಟ್ಟೇ ಮಾಡುತ್ತಾರೆ. ನೀವು ಸುಮ್ಮನೆ ಆರಾಮಾಗಿರಿ.
ಬೇರೆಯವರಿಗೆ ಮುಜುಗರ ಆಗಬಹುದಾದಂತಹ ಕೆಲಸಗಳನ್ನು ಮಾಡಿಕೊಳ್ಳಿ.
ದೇವರು, ಧ್ಯಾನ, ಯೋಗ, ನೀವು ನಂಬುವ ಶಕ್ತಿ ಮೇಲೆ ಗಮನ ಹರಿಸಿ. ನಿಮ್ಮೆಲ್ಲ ಎನರ್ಜಿ ಅಲ್ಲಿಗೇ ಹೋಗಲಿ.
ಮನೆಯಲ್ಲೇ ಕೂತು ಶಾಪಿಂಗ್ ಮಾಡಿ. ಇಷ್ಟದ ಟಿವಿ ನೋಡಿ, ಹೆಚ್ಚು ನಿದ್ದೆ ಮಾಡಿ.

