Tuesday, January 13, 2026
Tuesday, January 13, 2026
spot_img

HEALTH | ಡೈಜೆಷನ್ ಪ್ರಾಬ್ಲಂ ಇದ್ಯಾ? ಹಾಗಿದ್ರೆ ಈ ಆಹಾರಗಳು ನಿಮಗೆ ಬೆಸ್ಟ್! ತಿನ್ನೋಕೆ ಶುರುಮಾಡಿ

ಹೊಟ್ಟೆ ಉಬ್ಬರ, ಮಲಬದ್ಧತೆ, ಊಟ ಮಾಡಿದ ಅಸಹಜ ಅನುಭವ ಇವುಗಳು ಇಂದಿನ ಜೀವನಶೈಲಿಯಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ. ಔಷಧಿಗಳ ಮೇಲೆ ಮಾತ್ರ ಅವಲಂಬಿತವಾಗದೇ, ನಮ್ಮ ದೈನಂದಿನ ಆಹಾರದಲ್ಲೇ ಪರಿಹಾರ ಹುಡುಕುವುದು ಅತ್ಯಂತ ಪರಿಣಾಮಕಾರಿ ಮಾರ್ಗ. ಕರುಳಿನ ಆರೋಗ್ಯ ಉತ್ತಮವಾಗಿದ್ದರೆ ದೇಹದ ಒಟ್ಟು ಆರೋಗ್ಯವೂ ಸುಧಾರಿಸುತ್ತದೆ. ಕೆಲವು ಸರಳ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಸಹಜವಾಗುತ್ತದೆ.

  • ಬೇಳೆ: ಫೈಬರ್ ಮತ್ತು ಪ್ರಿಬಯಾಟಿಕ್‌ಗಳಲ್ಲಿ ಸಮೃದ್ಧವಾಗಿರುವ ಬೇಳೆ, ಕರುಳಿನ ಒಳಗಿನ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರ ನೀಡುತ್ತದೆ. ದಾಲ್ ಅಥವಾ ಸೂಪ್ ರೂಪದಲ್ಲಿ ಸೇವಿಸಬಹುದು.
  • ಕೆಫೀರ್: ಸಾಮಾನ್ಯ ಮೊಸರಿಗಿಂತ ಹೆಚ್ಚು ಪ್ರೋಬಯಾಟಿಕ್ ಹೊಂದಿರುವ ಕೆಫೀರ್ (ಹುದುಗಿಸಿದ ಹಾಲಿನಿಂದ ತಯಾರಿಸಿದ ಪಾನೀಯ), ಜೀರ್ಣಕ್ರಿಯೆ ಮತ್ತು ಕರುಳು-ಚರ್ಮದ ಆರೋಗ್ಯಕ್ಕೆ ಸಹಕಾರಿ.
  • ಚಿಯಾ ಬೀಜಗಳು: ಫೈಬರ್ ಹಾಗೂ ಒಮೆಗಾ-3 ಅಂಶಗಳಿಂದ ತುಂಬಿರುವ ಚಿಯಾ ಬೀಜಗಳು ಮಲಬದ್ಧತೆ ಕಡಿಮೆ ಮಾಡುತ್ತವೆ. ನೀರಿನಲ್ಲಿ ನೆನೆಸಿ ಸೇವಿಸುವುದು ಉತ್ತಮ.
  • ಕೆಂಪು ಅಥವಾ ನೇರಳೆ ಎಲೆಕೋಸು: ಹುದುಗಿಸಿದ ಎಲೆಕೋಸು ಪ್ರೋಬಯಾಟಿಕ್ ನೀಡುತ್ತದೆ, ಹಸಿ ಎಲೆಕೋಸು ಕರುಳಿನ ಒಳಪದರವನ್ನು ರಕ್ಷಿಸುತ್ತದೆ.
  • ಬಾಳೆಹಣ್ಣು ಮತ್ತು ಆಲೂಗಡ್ಡೆ: ನಿರೋಧಕ ಪಿಷ್ಟ ಹೊಂದಿರುವ ಇವುಗಳು ಕರುಳಿನ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.
  • ಅಗಸೆ ಬೀಜಗಳು: ಅಗಸೆ ಬೀಜಗಳು ಕರುಳಿನ ಚಲನಶೀಲತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ.

ಸರಿಯಾದ ಆಹಾರವೇ ಉತ್ತಮ ಔಷಧಿ ಎಂಬುದನ್ನು ನೆನಪಿಟ್ಟುಕೊಂಡು, ಈ ಆಹಾರಗಳನ್ನು ದಿನನಿತ್ಯದಲ್ಲಿ ಸೇರಿಸಿಕೊಂಡರೆ ಕರುಳಿನ ಆರೋಗ್ಯ ಉತ್ತಮವಾಗುತ್ತದೆ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

Most Read

error: Content is protected !!