ಝೀಕಾ ವೈರಸ್‌ ಬಗ್ಗೆ ಆತಂಕ ಬೇಡ, ಯಾರಿಗೂ ಪಾಸಿಟಿವ್‌ ಬಂದಿಲ್ಲ- ಆರೋಗ್ಯ ಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿಕ್ಕಬಳ್ಳಾಪುರದ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಝೋಕಾ ಸೋಂಕಿರುವುದು ಪತ್ತೆಯಾದ ಬೆನ್ನಲ್ಲೇ ರಾಜ್ಯದೆಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಪ್ರತಿಕ್ರಯಿಸಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಯಾರೂ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಯಾಕಂದರೆ, ಈ ವೈರಸ್‌ ಪತ್ತೆಯಾಗಿರುವುದ ಸೊಳ್ಳೆಗಳಲ್ಲಿ ಮಾತ್ರ. ಯಾವುದೇ ಮನುಷ್ಯನಿಗೆ ಸೋಂಕು ಸೋಕಿಲ್ಲ ಎಂದರು.

ಆ ಗ್ರಾಮದ ಸುತ್ತಮುತ್ತ ಆರೋಗ್ಯ ಅಧಿಕಾರಿಗಳು ಗಮನ ಹರಿಸಿದ್ದಾರೆ. ಕೆಲವರ ರಕ್ತದ ಮಾದರಿ ಕೂಡ ಸಂಗ್ರಹಿಸಿ ಲ್ಯಾಬ್‌ ಕಳಿಸಿದ್ದು, ವರದಿ ಬಂದ ಬಳಿಕವಷ್ಟೇ ಮಾಹಿತಿ ಸಿಗಲಿದೆ. ಅಲ್ಲಿವರೆಗೂ ಗರ್ಭಿಣಿಯರು, ಬಾಣಂತಿಯರು, ಮಕ್ಕಳು, ವೃದ್ಧರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು.

ಝೀಕಾ ಬಗ್ಗೆ ಭಯ ಬೇಡ, ಆರೋಗ್ಯ ಇಲಾಖೆಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೊಳ್ಳೆಗಳ ಬಗ್ಗೆ ಎಚ್ಚರವಿರಲಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!