Wednesday, December 10, 2025

HEALTH | ಸಕ್ಕರೆ vs ಕಲ್ಲುಸಕ್ಕರೆ ಇವೆರಡರಲ್ಲಿ ಮಕ್ಕಳಿಗೆ ಯಾವುದು ಕೊಡ್ಬಹುದು?

ಮಕ್ಕಳ ಬೆಳವಣಿಗೆಯಲ್ಲಿ ಆಹಾರಕ್ಕೆ ಬಳಸುವ ಸಣ್ಣ ಆಯ್ಕೆಗಳೂ ಸಹ ದೊಡ್ಡ ಪ್ರಭಾವ ಬೀರುತ್ತವೆ. ಅದರಲ್ಲೂ ಸಿಹಿ ಎಂದರೆ ಮಕ್ಕಳು ಸಿಕ್ಕಾಪಟ್ಟೆ ಖುಷಿಯಾಗುತ್ತಾರೆ, ಆದರೆ ಯಾವ ಸಿಹಿ ಮಕ್ಕಳ ಆರೋಗ್ಯಕ್ಕೆ ಸೂಕ್ತ ಎಂಬ ಪ್ರಶ್ನೆ ಹಲವು ಪೋಷಕರ ಮನಸ್ಸಿನಲ್ಲಿ ಇರುತ್ತದೆ. ಸಾಮಾನ್ಯ ಸಕ್ಕರೆ ಮತ್ತು ಕಲ್ಲುಸಕ್ಕರೆ ಇವೆರಡರ ನಡುವೆ ಇರುವ ವ್ಯತ್ಯಾಸ ತಿಳಿದುಕೊಂಡರೆ ಮಕ್ಕಳಿಗಾಗಿ ಸರಿಯಾದ ಆಯ್ಕೆ ಮಾಡಿಕೊಳ್ಳಲು ಸುಲಭವಾಗುತ್ತದೆ.

ಸಕ್ಕರೆ ಹೇಗಿದೆ?
ಪ್ಯಾಕೆಟ್ ಸಕ್ಕರೆ ಹೆಚ್ಚು ಶುದ್ಧೀಕರಣ ಪ್ರಕ್ರಿಯೆಗೊಳಗಾಗಿರುತ್ತದೆ. ಇದರಿಂದ ತಕ್ಷಣ ಶಕ್ತಿ ಸಿಗುತ್ತದೆ, ಆದರೆ ಪೋಷಕಾಂಶಗಳು ಅಲ್ಪ. ಹೆಚ್ಚು ಬಳಸಿದರೆ ದಂತ ಸಮಸ್ಯೆ, ತೂಕ ಹೆಚ್ಚಳ ಮತ್ತು ಶಕ್ತಿಯ ಅಸಮತೋಲನ ಜೊತೆಗೆ ಸಣ್ಣವಯಸ್ಸಿನಲ್ಲೇ ಶುಗರ್ ಖಾಯಿಲೆಗೆ ಒಳಗಾಗಬೇಕಾಗುತ್ತದೆ.

ಕಲ್ಲುಸಕ್ಕರೆಯ ಲಾಭಗಳು
ಕಲ್ಲುಸಕ್ಕರೆ ಕಡಿಮೆ ಸಂಸ್ಕರಣೆಯದ್ದಾಗಿದ್ದು, ಸ್ವಲ್ಪಮಟ್ಟಿನ ಖನಿಜ ಅಂಶಗಳನ್ನು ಹೊಂದಿರುತ್ತದೆ. ಜೀರ್ಣಕ್ರಿಯೆಗೆ ತುಸು ಸುಲಭ, ಕೆಮ್ಮು ಅಥವಾ ಗಂಟಲು ನೋವು ಇರುವ ಸಂದರ್ಭಗಳಲ್ಲಿ ಸಹಾಯಕವೆಂದು ಹಲವರು ನಂಬುತ್ತಾರೆ.

ಮಕ್ಕಳಿಗೆ ಯಾವುದು ಉತ್ತಮ?

ದೈನಂದಿನ ಬಳಕೆಗೆ ಕಲ್ಲುಸಕ್ಕರೆ ತುಸು ಉತ್ತಮ ಆಯ್ಕೆ. ಆದರೆ ಯಾವುದೇ ಸಿಹಿಯಾದರೂ ಪ್ರಮಾಣ ಮುಖ್ಯ. ಸಿಹಿಯನ್ನು ಕಡಿಮೆ ಪ್ರಮಾಣದಲ್ಲೇ ನೀಡುವುದು, ಸಹಜ ಸಿಹಿತನ ಇರುವ ಹಣ್ಣುಗಳತ್ತ ಮಕ್ಕಳನ್ನು ಅಭ್ಯಾಸಗೊಳಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಸರಿಯಾದ ಮಾರ್ಗ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

error: Content is protected !!