ಇತ್ತೀಚಿನ ದಿನಮಾನಗಳಲ್ಲಿ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ತಪ್ಪಾದ ಆಹಾರ ಕ್ರಮ ಮತ್ತು ಜೀವನಶೈಲಿ ಈ ತೊಂದರೆ ಹೆಚ್ಚಲು ಕಾರಣವಾಗಿದೆ. ವೈದ್ಯಕೀಯ ತಜ್ಞರ ಪ್ರಕಾರ, ಯೂರಿಕ್ ಆ್ಯಸಿಡ್ ನಿಯಂತ್ರಣಕ್ಕೆ ಸರಿಯಾದ ಆಹಾರ ಪದ್ಧತಿ ಹಾಗೂ ನೀರಿನ ಸೇವನೆ ಅತ್ಯಗತ್ಯ.
ಬಾರ್ಲಿ ಸೇವನೆ – ಗೋಧಿ ಹಿಟ್ಟಿನ ಬದಲಿಗೆ ಬಾರ್ಲಿ ಹಿಟ್ಟು ಬಳಸಿ; ಇದು ಪ್ಯೂರಿನ್ ಮಟ್ಟವನ್ನು ನಿಯಂತ್ರಿಸಿ ಯೂರಿಕ್ ಆ್ಯಸಿಡ್ ಕಡಿಮೆ ಮಾಡುತ್ತದೆ.
ಕುಂಬಳಕಾಯಿ ಸೇವನೆ – ದೇಹವನ್ನು ತಂಪಾಗಿಸಿ, ಉರಿಯೂತ ನಿವಾರಣೆ ಮಾಡಿ, ಯೂರಿಕ್ ಆ್ಯಸಿಡ್ ಹೊರಹಾಕಲು ಸಹಕಾರಿ. ಕುಂಬಳಕಾಯಿ ಜ್ಯೂಸ್ ಇನೂ ಉತ್ತಮ.
ಸೌತೆಕಾಯಿ ಸೇವನೆ – ನೀರಿನ ಅಂಶ ಹೆಚ್ಚು ಇರುವುದರಿಂದ ದೇಹವನ್ನು ಹೈಡ್ರೇಟ್ ಆಗಿ ಇಡುತ್ತದೆ ಮತ್ತು ಕಿಡ್ನಿಗಳನ್ನು ಶುದ್ಧಗೊಳಿಸುತ್ತದೆ.
ವಿಟಮಿನ್ C ಹಣ್ಣುಗಳು – ಪೇರಳೆ, ಕಿತ್ತಳೆ, ಕಿವಿ ಹಣ್ಣುಗಳು ರಕ್ತದಲ್ಲಿನ ಯೂರಿಕ್ ಆ್ಯಸಿಡ್ ಮಟ್ಟವನ್ನು ಕಡಿಮೆ ಮಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸಾಕಷ್ಟು ನೀರು ಕುಡಿಯುವುದು – ದಿನಕ್ಕೆ 3–4 ಲೀಟರ್ ನೀರು ಕುಡಿಯುವುದರಿಂದ ಯೂರಿಕ್ ಆ್ಯಸಿಡ್ ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ.