ಭಾರತದಲ್ಲಿ ಹೃದ್ರೋಗದಿಂದ ಬಳಲುವವರ ಸಂಖ್ಯೆ ದಿನನಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿನ ಬದಲಾವಣೆ ಮುಖ್ಯ ಕಾರಣವಾಗಿದೆ. ತುರ್ತು ಆಹಾರ ಪದ್ಧತಿ, ಎಣ್ಣೆ ಮತ್ತು ಕೊಬ್ಬು ಹೆಚ್ಚಿರುವ ಆಹಾರ, ಅಧಿಕ ಒತ್ತಡ ಮತ್ತು ಅನಿಯಮಿತ ನಿದ್ದೆ ಹೃದಯಕ್ಕೆ ಹಾನಿಕಾರಕವಾಗುತ್ತವೆ. ಇದರಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟ ಹೆಚ್ಚುತ್ತಿದ್ದು, ಹೃದಯಾಘಾತ, ಕೊರೋನರಿ ಆರ್ಟರಿ ಡಿಸೀಜ್, ಟ್ರಿಪಲ್ ವೆಸಲ್ ಡಿಸೀಜ್ ಸೇರಿದಂತೆ ವಿವಿಧ ಹೃದ್ರೋಗದ ಅಪಾಯವು ಉಂಟಾಗುತ್ತದೆ.
ಈ ಅಪಾಯವನ್ನು ತಡೆಯಲು ಟ್ರೋಪೋನಿನ್ ಟಿ ಪರೀಕ್ಷೆ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಟ್ರೋಪೋನಿನ್ ಹೃದಯ ಸ್ನಾಯುಗಳಲ್ಲಿ ಇರುವ ಪ್ರೋಟೀನ್ ಆಗಿದ್ದು, ಅದರ ಮಟ್ಟದಲ್ಲಿ ಏರಿಕೆಯಾಗಿದ್ದರೆ ಹೃದಯ ಸ್ನಾಯುಗಳಿಗೆ ಹಾನಿಯ ಸೂಚನೆ ನೀಡುತ್ತದೆ. ಎದೆ ನೋವು, ತಲೆತಿರುಗುವಿಕೆ, ಬೆವರು, ವಾಂತಿ ಅಥವಾ ಅತಿಯಾದ ಆಯಾಸ ಕಂಡುಬಂದರೆ ತಕ್ಷಣ ಈ ರಕ್ತ ಪರೀಕ್ಷೆಯನ್ನು ಮಾಡಿಸಬೇಕು.
ಟ್ರೋಪೋನಿನ್ ಟಿ ಪರೀಕ್ಷೆಯು ಒಂದು ರೀತಿಯ ರಕ್ತ ಪರೀಕ್ಷೆಯಾಗಿದ್ದು, ಈ ಪರೀಕ್ಷೆಯಲ್ಲಿ ಕೈಯ ಅಭಿಧಮನಿಯೊಳಗೆ ಸೂಜಿ ಹಾಕಿ ರಕ್ತದ ಮಾದರಿ ತೆಗೆದುಕೊಳ್ಳಲಾಗುತ್ತದೆ. ಈ ಪರೀಕ್ಷೆಯ ಮೂಲಕ ಹೃದಯದ ಆರೋಗ್ಯ ಸ್ಥಿತಿ ನಿರೀಕ್ಷಿಸಿ, ಭವಿಷ್ಯದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು. ಕಾಲಕ್ಕೆ ಈ ಪರೀಕ್ಷೆ ಮಾಡಿಸಿಕೊಂಡರೆ, ಹೃದಯಾಘಾತದ ಅಪಾಯವನ್ನು ತಡೆಗಟ್ಟಬಹುದು.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

