ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಜೂರವನ್ನು ಹಸಿಯಾಗಿ ತೆಗೆದುಕೊಳ್ಳುವುದಕ್ಕಿಂತ ಒಣ ಅಂಜೂರವನ್ನು ಸೇವಿಸುವುದು ಉತ್ತಮ. ಅದೂ ಕೂಡ ಅಂಜೂರವನ್ನು ರಾತ್ರಿ ನೆನೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಮ್, ಸತು, ಫೈಬರ್ ಮತ್ತು ಪ್ರೋಟೀನ್‌ನಂತಹ ಅನೇಕ ಪೋಷಕಾಂಶಗಳು ಅಂಜೂರದಲ್ಲಿ ಅಡಗಿವೆ. ಇವು ಗರ್ಭಿಣಿಯರ ಆರೋಗ್ಯಕ್ಕೆ ಬಹಳ ಒಳ್ಳೆಯದು.
- ಗರ್ಭಿಣಿಯರಿಗೆ ರಕ್ತ ಹೆಚ್ಚಿಸುವಲ್ಲಿ ಅಂಜೂರದ ಪಾತ್ರ ಹೆಚ್ಚಿದೆ. ಐದಾರು ತಿಂಗಳು ಕಳೆದಂತೆ ಕ್ರಮೇಣ ರಕ್ತ ಕೊರತೆ ಉಂಟಾಗುತ್ತದೆ. ರಕ್ತದ ಅಭಿವೃದ್ಧಿಗೆ ವೈದ್ಯರು ಒಣ ಅಂಜೂರು ನೆನೆಸಿ ತಿನ್ನಲು ಸಲಹೆ ನೀಡುತ್ತಾರೆ.
- ಅಂಜೂರ ನೆನೆಸಿದ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.
- ಇವುಗಳಲ್ಲಿನ ನಾರಿನಂಶವು ಮಲಬದ್ಧತೆಯ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಸಹ ಹೆಚ್ಚಿಸುತ್ತದೆ. ಅಂಜೂರದ ನೀರನ್ನು ಕುಡಿಯುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ.
- ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ಮೂಳೆಗಳು ಗಟ್ಟಿಯಾಗುತ್ತವೆ ಮತ್ತು ಬಲಿಷ್ಠವಾಗುತ್ತವೆ.
- ದೇಹಕ್ಕೆ ಬೇಕಾದ ಕಬ್ಬಿಣಾಂಶ ಸಿಗುತ್ತದೆ, ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ.
- ಉಸಿರಾಟ ಸಮಸ್ಯೆ, ತ್ವಚೆಯ ಸಮಸ್ಯೆಗಳೂ ಕಡಿಮೆಯಾಗುತ್ತವೆ, ಆಯಾಸ ಇರುವುದಿಲ್ಲ
ಒಂದು ಬಟ್ಟಲಿನಲ್ಲಿ 2 ಅಥವಾ 3 ಅಂಜೂರದ ಹಣ್ಣುಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು, ಅವು ಮುಳುಗುವವರೆಗೆ ನೀರನ್ನು ಸುರಿಯಿರಿ. ಅವುಗಳನ್ನು ರಾತ್ರಿಯಿಡೀ ನೆನೆಸಿ ಈ ಹಣ್ಣುಗಳನ್ನು ಬೆಳಿಗ್ಗೆ ಬೇಗನೆ ತಿಂದು ಆ ಬೆಳಿಗ್ಗೆ ನೀರನ್ನು ಕುಡಿಯಿರಿ. ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ..