ಆರೋಗ್ಯವಾಗಿರಲು ವಿಟಮಿನ್ ಡಿ ಬಹಳ ಮುಖ್ಯ. ಇದನ್ನು ಪಡೆಯಲು ಕೆಲವು ಉತ್ತಮ ಆಹಾರಗಳು ಇಲ್ಲಿವೆ:
ಸಾಲ್ಮನ್, ಸಾರ್ಡೀನ್, ಹೆರಿಂಗ್ ಮತ್ತು ಮ್ಯಾಕೆರೆಲ್‌ನಂತಹ ಮೀನುಗಳಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ. ಕೆಂಪು ಮಾಂಸ ಇದು ಕೂಡ ವಿಟಮಿನ್ ಡಿ ಯ ಉತ್ತಮ ಮೂಲ. ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಡಿ ಕಂಡುಬರುತ್ತದೆ.
ಸೋಯಾ ಹಾಲು, ಬಾದಾಮಿ ಹಾಲು ಮತ್ತು ಓಟ್ಸ್ ಹಾಲಿಗೆ ವಿಟಮಿನ್ ಡಿ ಸಮೃದ್ಧವಾಗಿರುತ್ತದೆ. ಅಣಬೆಗಳು ನೈಸರ್ಗಿಕವಾಗಿ ವಿಟಮಿನ್ ಡಿ ಅನ್ನು ಹೊಂದಿರುತ್ತವೆ. ವಿಟಮಿನ್ ಡಿ ಅಂಶ ಸೇರಿಸಲಾದ ಉಪಹಾರ ಧಾನ್ಯಗಳು ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ನೆನಪಿಡಿ, ಆಹಾರದ ಜೊತೆಗೆ ಸೂರ್ಯನ ಬೆಳಕು ಕೂಡ ವಿಟಮಿನ್ ಡಿ ಯ ಉತ್ತಮ ಮೂಲವಾಗಿದೆ. ಬೆಳಿಗ್ಗೆ ಅಥವಾ ಸಂಜೆಯ ಬಿಸಿಲಿನಲ್ಲಿ ಸ್ವಲ್ಪ ಸಮಯ ಕಳೆಯುವುದು ಸಹ ಪ್ರಯೋಜನಕಾರಿ.