ಮಳೆಗಾಲದಲ್ಲಿ ಹವಾಮಾನ ಬದಲಾವಣೆ, ತೇವಾಂಶ, ಸೋಂಕುಗಳು ಹೆಚ್ಚಾಗುವ ಕಾರಣದಿಂದ ಜ್ವರ, ಶೀತ, ತಲೆನೋವು ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಇಂತಹ ಸಮಯದಲ್ಲಿ ಆಯುರ್ವೇದಿಕ ಶಾಟ್‌ಗಳು (Herbal Immunity Boosters) ದೇಹದ ರೋಗನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ಹೆಚ್ಚಿಸಿ ಆರೋಗ್ಯದ ಶಕ್ತಿಯನ್ನು ಬಲಪಡಿಸುತ್ತವೆ.
ತುಳಸಿ-ಶುಂಠಿ ಶಾಟ್ (Tulsi-Ginger Shot)
ತುಳಸಿ ಎಲೆ, ಶುಂಠಿ, ನಿಂಬೆ ರಸ ಮತ್ತು ಜೇನು ತುಪ್ಪ.
ತುಳಸಿ ಮತ್ತು ಶುಂಠಿ ಶೀತ, ಕೆಮ್ಮು ಮತ್ತು ಇನ್‌ಫೆಕ್ಷನ್‌ಗಳ ವಿರುದ್ಧ ಪರಿಣಾಮಕಾರಿಯಾಗಿವೆ. ಇದು ಉಸಿರಾಟದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಶರೀರವನ್ನು ಬೆಚ್ಚಗಿಡುತ್ತದೆ.
ಅಮೃತಬಳ್ಳಿ ಶಾಟ್ (Giloy Shot)
ಅಮೃತಬಳ್ಳಿ ರಸ, ನಿಂಬೆರಸ ಮತ್ತು ಒಂದು ಚಿಟಿಕೆ ಹುಣಸೆಹುಡಿ.
ಅಮೃತಬಳ್ಳಿ ರಸ ಶರೀರದ ದೋಷಗಳನ್ನು ನಿವಾರಿಸಿ, ರಕ್ತವನ್ನು ಶುದ್ಧಪಡಿಸುತ್ತದೆ. ಜ್ವರ, ವಾತ, ಮತ್ತು ತ್ವಚಾ ಸಮಸ್ಯೆಗಳಿಗೆ ಉತ್ತಮ ಪರಿಹಾರ.
ಆಮ್ಲ ಶಾಟ್ (Amla Shot)
ಆಮ್ಲ ರಸ, ಜೇನುತುಪ್ಪ ಮತ್ತು ಕಾಳುಮೆಣಸು ಪುಡಿ.
ಆಮ್ಲ ದಲ್ಲಿ ವಿಟಮಿನ್ C ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅತ್ಯುತ್ತಮ ಔಷಧಿ. ಇದು ಶೀತಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ.
ಹುಣಸೆಹಣ್ಣು-ಬೆಲ್ಲ ಶಾಟ್ (Tamarind-Jaggery Shot)
ಹುಣಸೆ ಹಣ್ಣಿನ ರಸ, ಬೆಲ್ಲ ಮತ್ತು ಕಾಳುಮೆಣಸು ಪುಡಿ.
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆಗಳು ಹೆಚ್ಚಾಗುತ್ತವೆ. ಈ ಶಾಟ್ ಜೀರ್ಣಕ್ರಿಯೆ ಉತ್ತಮಗೊಳಿಸಲು ಸಹಾಯ ಮಾಡುತ್ತದೆ ಮತ್ತು ದೇಹದ ಉಷ್ಣತೆ ಸಮತೋಲನದಲ್ಲಿಡುತ್ತದೆ.
ಕೊತ್ತಂಬರಿ-ಜೀರಿಗೆ ಶಾಟ್ (Coriander-Jeera Shot)
ಕೊತ್ತಂಬರಿ, ಜೀರಿಗೆ ಹಾಕಿ ಕುದಿಸಿದ ನೀರು, ನಿಂಬೆರಸ ಮತ್ತು ಇಂಗು ಮಿಶ್ರಣ.
ಕೊತ್ತಂಬರಿ ಜೀರ್ಣಕ್ರಿಯೆ ಸುಧಾರಿಸಿ, ದೇಹದಲ್ಲಿ ತೇವಾಂಶ ಬದಲಾಗುವ ಕಾರಣ ಉಂಟಾಗುವ ಅಜೀರ್ಣ, ಹೊಟ್ಟೆನೋವು ಇತ್ಯಾದಿಗೆ ಪರಿಹಾರ ನೀಡುತ್ತದೆ.
ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲೇ ಸರಿ. ಆದರೆ ಈ ಆಯುರ್ವೇದ ಶಾಟ್‌ಗಳನ್ನು ಪ್ರತಿದಿನ ಅಥವಾ ವಾರದಲ್ಲಿ 2-3 ಬಾರಿ ಸೇವಿಸಿದರೆ, ಇನ್‌ಫೆಕ್ಷನ್, ಜೀರ್ಣಕ್ರಿಯೆ, ಉಸಿರಾಟ ಸಮಸ್ಯೆಗಳಿಂದ ನೀವು ದೂರವಿರಬಹುದು. ಇವು ನೈಸರ್ಗಿಕವಾಗಿಯೂ, ಸುಲಭವಾಗಿಯೂ ಮನೆಯಲ್ಲಿಯೇ ತಯಾರಿಸಬಹುದಾದ ಶಕ್ತಿದಾಯಕ ಆಯುರ್ವೇದಿಕ ಉಪಾಯಗಳಾಗಿವೆ. (ಅಂತರ್ಜಾಲದಲ್ಲಿ ನೀಡಿದ ಮಾಹಿತಿಯ ಆಧಾರದಲ್ಲಿ ಈ ಲೇಖನ ಪ್ರಕಟವಾಗಿದೆ)