ಆಯುರ್ವೇದದಲ್ಲಿ ‘ಪವಿತ್ರ ಗಿಡ’ ಎಂದು ವರ್ಣಿಸಲ್ಪಡುವ ತುಳಸಿ ಗಿಡಕ್ಕೆ ಸಹಸ್ತ್ರ ವರ್ಷಗಳಿಂದವೇ ಪೂಜ್ಯ ಸ್ಥಾನವಿದೆ. ಈಗ, ವಿಜ್ಞಾನವೂ ಕೂಡ ಈ ಪ್ರಾಚೀನ ಗಿಡಮೂಲಿಕೆಯ ಆರೋಗ್ಯ ಪ್ರಯೋಜನಗಳನ್ನು ಒಪ್ಪಿಕೊಂಡಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿಯನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ ಅಭ್ಯಾಸ ಎಂದು ತಜ್ಞರು ಹೇಳುತ್ತಾರೆ. ಇದು ಕೇವಲ ಆಯುರ್ವೇದೀಯ ಆಚರಣೆಯಲ್ಲ, ಬದಲಾಗಿ ದೇಹ, ಮನಸ್ಸು ಮತ್ತು ಚರ್ಮದ ಆರೋಗ್ಯಕ್ಕೆ ಬಹುಮುಖ ಲಾಭವನ್ನು ಒದಗಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ : ತುಳಸಿಯ ಪ್ರಮುಖ ಲಕ್ಷಣವೆಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ತುಳಸಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಪ್ರಾಕೃತಿಕ ಎಂಟಿಸೆಪ್ಟಿಕ್ ಅಂಶಗಳು ದೇಹವನ್ನು ಜ್ವರ, ಶೀತ ಮುಂತಾದ ಸಾಮಾನ್ಯ ಸೋಂಕುಗಳಿಂದ ರಕ್ಷಿಸುತ್ತವೆ. ಇವು ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಸರಿಹೊಂದುತ್ತದೆ.
ದೇಹವನ್ನು ನಿರ್ವಿಷಗೊಳಿಸುತ್ತದೆ: ಇದಲ್ಲದೆ, ತುಳಸಿ ಶಕ್ತಿಶಾಲಿ ಡಿಟಾಕ್ಸ್ ಏಜೆಂಟ್ ಆಗಿದ್ದು, ದೇಹದಲ್ಲಿನ ವಿಷವನ್ನು ಹೊರಹಾಕಿ ರಕ್ತವನ್ನು ಶುದ್ಧೀಕರಿಸುತ್ತದೆ. ದಿನದ ಆರಂಭದಲ್ಲೇ ತುಳಸಿ ಚಹಾವನ್ನು ಸೇವಿಸುವುದು ದೇಹದ ಒಳಾಂಗಿಕ ಸ್ವಚ್ಛತೆಗೆ ಸಹಾಯಕವಾಗಿದೆ. ಈ ಮೂಲಿಕೆಯ ಮೂತ್ರವರ್ಧಕ ಗುಣಲಕ್ಷಣಗಳು ಮೂತ್ರದ ಮೂಲಕ ವಿಷವನ್ನು ಹೊರಹಾಕುವುದನ್ನು ಉತ್ತೇಜಿಸುತ್ತದೆ.
ಉಸಿರಾಟದ ಆರೋಗ್ಯ ಉತ್ತೇಜಿಸುತ್ತದೆ : ಉಸಿರಾಟದ ಸಮಸ್ಯೆಗಳಿಂದ ಬಳಲುವವರಿಗೆ, ತುಳಸಿ ನೈಸರ್ಗಿಕ ಪರಿಹಾರವಾಗಿದೆ. ಇದರಲ್ಲಿ ಉರಿಯೂತ ಮತ್ತು ಸೂಕ್ಷ್ಮಜೀವಿ ವಿರೋಧಿ ಗುಣಗಳಿರುವುದರಿಂದ ಬ್ರಾಂಕೈಟಿಸ್, ಸೈನಸೈಟಿಸ್, ಆಸ್ತಮಾ ಮುಂತಾದ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳಿಗೆ ಶಮನ ನೀಡುತ್ತದೆ.
ಒತ್ತಡ ಮತ್ತು ಆತಂಕ ಕಡಿಮೆ ಮಾಡುತ್ತದೆ : ಇತ್ತೀಚಿನ ಜೀವನ ಶೈಲಿಯಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯವಾಗಿದೆ. ಈ ಪೈಪೋಟಿಯ ಬದುಕಿನಲ್ಲಿ ತುಳಸಿಯ ಸೇವನೆ ಮನಸ್ಸಿಗೆ ಶಾಂತಿ ನೀಡುವ ಸಹಜ ಮಾರ್ಗ. ತುಳಸಿಯ ಅಡಾಪ್ಟೋಜೆನ್ ಗುಣಗಳು ಕಾರ್ಟಿಸೋಲ್ ಹಾರ್ಮೋನ್ ಮಟ್ಟವನ್ನು ತಗ್ಗಿಸಿ ವಿಶ್ರಾಂತಿ ಭಾವನೆಯನ್ನು ಹೆಚ್ಚಿಸುತ್ತವೆ.
ಜೀರ್ಣಕ್ರಿಯೆ ಹೆಚ್ಚಿಸುತ್ತದೆ : ಜೀರ್ಣಕ್ರಿಯೆ ಸಹ ತುಳಸಿಯಿಂದ ಉತ್ತಮವಾಗುತ್ತದೆ. ಇದರಿಂದ ಜೀರ್ಣಕಾರಿ ಕಿಣ್ವಗಳ ಉತ್ಪಾದನೆ ಉತ್ತೇಜಿತವಾಗಿ, ಅಜೀರ್ಣ, ಹೊಟ್ಟೆಯುಬ್ಬರ, ಆಮ್ಲೀಯತೆ ಮುಂತಾದ ಸಮಸ್ಯೆಗಳು ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಸೇವನೆಯು ದಿನವಿಡೀ ಸುಗಮ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ.
ಹೃದಯದ ಆರೋಗ್ಯ ಬೆಂಬಲಿಸುತ್ತದೆ : ತುಳಸಿ ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪಾತ್ರವಹಿಸುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಿ, ರಕ್ತದೊತ್ತಡವನ್ನು ನಿಯಂತ್ರಿಸಿ, ರಕ್ತ ಸಂಚಲನವನ್ನೂ ಸುಧಾರಿಸುತ್ತದೆ. ಹೀಗಾಗಿ, ದೀರ್ಘಾವಧಿಯ ಹೃದಯರೋಗದ ಅಪಾಯವನ್ನು ತಗ್ಗಿಸಲು ಸಹಾಯಕವಾಗಿದೆ.
ಒಟ್ಟಾರೆ, ತುಳಸಿಯ ನಿಯಮಿತ ಸೇವನೆ ಆರೋಗ್ಯದ ಮೇಲೆ ಬಹುಮುಖ ಪ್ರಯೋಜನಗಳನ್ನು ಬೀರಬಲ್ಲದು. ಇದು ಭಾರತೀಯ ಪರಂಪರೆಯ ಅಂಚಿನಲ್ಲಿ ಪ್ರಾರಂಭವಾದರೂ, ಇಂದಿನ ವೈಜ್ಞಾನಿಕ ಯುಗದಲ್ಲೂ ಅದರ ಪ್ರಾಮುಖ್ಯತೆ ಅಪಾರವಾಗಿದೆ.