HEALTH | ಕಾಮಾಲೆ ಕಾಯಿಲೆಯ ಸೂಚನೆಗಳೇನು? ಯಾವ ರೀತಿಯ ಆಹಾರ ಸೇವಿಸಬೇಕು?

ಬದಲಾಗುತ್ತಿರುವ ಜೀವನಶೈಲಿ, ಅವ್ಯವಸ್ಥಿತ ಆಹಾರ ಪದ್ಧತಿ, ಮತ್ತು ಅನಾರೋಗ್ಯಕರ ದಿನಚರಿಯಿಂದಾಗಿ ಇಂದಿನ ದಿನಗಳಲ್ಲಿ ಕಾಮಾಲೆ ರೋಗ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಲಿವರ್‌ನಲ್ಲಿ ತೊಂದರೆಯಾದಾಗ, ದೇಹದಲ್ಲಿ ಪಿತ್ತ ರಸ (ಬಿಲಿರೂಬಿನ್) ಅಧಿಕವಾಗಿದ್ರೆ, ಈ ರೋಗ ಉಂಟಾಗುತ್ತೆ.

What causes jaundice in adults? | MD Anderson Cancer Center

ಹಳದಿ ಕಣ್ಣು, ಮೂತ್ರ ಬಣ್ಣದಲ್ಲಿ ಬದಲಾವಣೆ, ಹಸಿವು ಇಲ್ಲದಿರುವುದು ಇತ್ಯಾದಿ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುವ ಈ ಕಾಯಿಲೆ ಸರಿಯಾದ ಸಮಯಕ್ಕೆ ಗಮನಿಸದಿದ್ದರೆ ಗಂಭೀರ ರೂಪ ಪಡೆಯಬಹುದು. ಈ ಹಿನ್ನಲೆಯಲ್ಲಿ, ಕಾಮಾಲೆ ರೋಗದ ಕಾರಣಗಳು, ಲಕ್ಷಣಗಳು, ತಿನ್ನಬೇಕಾದ ಆಹಾರ, ಮತ್ತು ಮನೆಮದ್ದುಗಳ ಬಗ್ಗೆ ಸರಳವಾಗಿ ತಿಳಿದುಕೊಳ್ಳೋಣ.

ಕಾಮಾಲೆ ರೋಗದ ಮುಖ್ಯ ಲಕ್ಷಣಗಳು:

ಕಣ್ಣು, ಚರ್ಮದ ಬಣ್ಣ ಹಳದಿಯಾಗೋದು, ಸೆರಮ್ ಬಿಳುರೂಬಿನ್ ಹೆಚ್ಚಾಗಿ ಹಳದಿ ಬಣ್ಣದ ಮೂತ್ರ, ಮೈಕೈ ನೋವು, ಜ್ವರ, ವಾಂತಿ, ತೂಕ ತಗ್ಗೋದು, ಹಸಿವು ಕಡಿಮೆಯಾಗೋದು, ನಿದ್ರೆ ಸರಿ ಬಾರದಿರುವುದು ಇವೆಲ್ಲಾ ಲಕ್ಷಣಗಳು ಕಂಡು ಬಂದ್ರೆ ತಡಮಾಡದೆ ಡಾಕ್ಟರ್‌ ಬಳಿ ಹೋಗೋದು ಉತ್ತಮ.

ಯಾವ ರೀತಿಯ ಆಹಾರ ತಿನ್ನಬೇಕು?
ಕಾಮಾಲೆ ಆಗಿರೋ ಸಮಯದಲ್ಲಿ ಹಾಲು, ಎಳನೀರು, ಗ್ಲುಕೋಸ್‌ ನೀರು, ನಿಂಬೆ ರಸ ಹೀಗೆ ದ್ರವ ಆಹಾರವೇ ಹೆಚ್ಚು ಉಪಯುಕ್ತ. ಎಣ್ಣೆ ಪದಾರ್ಥ ಬೇಡ, ಮಜ್ಜಿಗೆ ಅಥವಾ ಸ್ವಲ್ಪ ತುಪ್ಪ ಮಾತ್ರ ಎರಡನೇ ವಾರದಿಂದ ಕೊಟ್ಟರೆ ಉತ್ತಮ.

ಕಾಮಾಲೆ ತಡೆಯಲು ಸರಿಯಾದ ಆಹಾರ, ಪಾನೀಯ ಮತ್ತು ವಿಶ್ರಾಂತಿ ತುಂಬಾ ಮುಖ್ಯ. ಮನೆಯ ಮದ್ದಿಗಿಂತ ವೈದ್ಯರ ಸಲಹೆ ಮೊದಲು ಪಡೆದುಕೊಳ್ಳುವುದು ಬಹಳ ಮುಖ್ಯ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!