ವಿಟಮಿನ್ B12 ಒಂದು ಪ್ರಮುಖ ಪೋಷಕಾಂಶ, ಅದು ದೇಹದಲ್ಲಿ ರಕ್ತಕಣಗಳ ಉತ್ಪಾದನೆ, ನರವಿಕಾಸ ಮತ್ತು ಮೆದುಳಿನ ಸರಿಯಾದ ಕಾರ್ಯಾಚರಣೆಗೆ ಅಗತ್ಯವಿದೆ. ಆದರೆ ದೇಹದಲ್ಲಿ ಈ ಪೋಷಕಾಂಶದ ಕೊರತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ವೈದ್ಯರು ವಿಟಮಿನ್ B12 ಕೊರತೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ, ಯಾಕೆಂದ್ರೆ ಇದರ ಲಕ್ಷಣಗಳು ಗಮನಕ್ಕೆ ಬಾರದೆ ಮುಂದೆ ಗಂಭೀರ ಆರೋಗ್ಯ ಸಮಸ್ಯೆಗಳಾಗಿ ಪರಿಣಮಿಸಬಹುದು.
- ಆಯಾಸ ಮತ್ತು ದೌರ್ಬಲ್ಯ: ಸಾಮಾನ್ಯ ಆಯಾಸ, ಶಕ್ತಿಯ ಕೊರತೆ, ಮತ್ತು ಸ್ನಾಯು ದೌರ್ಬಲ್ಯ ಉಂಟಾಗುತ್ತದೆ.
- ರಕ್ತಹೀನತೆ: B12 ಕೊರತೆಯಿಂದ ರಕ್ತದಲ್ಲಿ ರಕ್ತಕಣಗಳ ಪ್ರಮಾಣ ಕಡಿಮೆಯಾಗುತ್ತವೆ. ಇದರ ಪರಿಣಾಮವಾಗಿ ಉಸಿರಾಟದ ತೊಂದರೆ, ತಲೆತಿರುಗುವಿಕೆ, ಮತ್ತು ದಣಿವು ಉಂಟಾಗಬಹುದು.
- ಜೀರ್ಣಕಾರಿ ಸಮಸ್ಯೆಗಳು: ಹಸಿವು ಕಡಿಮೆಯಾಗುವುದು, ಮಲಬದ್ಧತೆ, ಅತಿಸಾರ, ಮತ್ತು ನಾಲಿಗೆ ಉರಿಯೂತ (ಗ್ಲೋಸೈಟಿಸ್) ಉಂಟಾಗಬಹುದು.
- ಮೆದುಳಿನ ಸಮಸ್ಯೆ: ಗಮನ ಶಕ್ತಿಯ ಕಡಿಮೆಯಾಗುವುದು, ನೆನಪು ಕಳೆದುಕೊಳ್ಳುವುದು, ಒತ್ತಡ, ಇಂದ್ರಿಯ ಸ್ಥಿರತೆ ಸಮಸ್ಯೆ ಉಂಟಾಗಬಹುದು.
- ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು: ಖಿನ್ನತೆ, ಮನಸ್ಥಿತಿ ಬದಲಾವಣೆಗಳು, ಮತ್ತು ವರ್ತನೆಯ ಬದಲಾವಣೆಗಳು ಸಂಭವಿಸಬಹುದು.
ಬಿ12 ಕೊರತೆಯ ಲಕ್ಷಣಗಳನ್ನು ನೀವು ಹೊಂದಿದ್ದರೆ, ವೈದ್ಯರನ್ನು ಭೇಟಿ ಮಾಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ಸ್ವಯಂ-ಚಿಕಿತ್ಸೆ ಅಪಾಯಕಾರಿ.(Disclaimer: ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

