ಬೇಕಾಗುವ ಸಾಮಾಗ್ರಿಗಳು:
ಜೀರಿಗೆ – 3 ಟೇಬಲ್ ಸ್ಪೂನ್
ಕೊತ್ತಂಬರಿ ಬೀಜ 10 ಟೇಬಲ್ ಸ್ಪೂನ್
2 ಟೀ ಸ್ಪೂನ್ ಕಾಳುಮೆಣಸು
6 -ಏಲಕ್ಕಿ
8 – ಲವಂಗ
1½ ಟೀ ಸ್ಪೂನ್ ಅರಿಶಿನ
12 ಟೀ ಸ್ಪೂನ್ ಶುಂಠಿ ಪುಡಿ
ಮಾಡುವ ವಿಧಾನ:
ಒಂದು ಪ್ಯಾನ್ ಗೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಣಸು ಸೇರಿಸಿ ಕಡಿಮೆ ಉರಿಯಲ್ಲಿ ಪರಿಮಳ ಬರುವವರೆಗೆ ಹುರಿಯಿರಿ. ನಂತರ ಏಲಕ್ಕಿ ಮತ್ತು ಲವಂಗ ಹಾಕಿ ಸ್ವಲ್ಪ ಹುರಿಯಿರಿ.
ತಣ್ಣಗಾದ ನಂತರ, ಬ್ಲೆಂಡರ್‌ಗೆ ವರ್ಗಾಯಿಸಿ ಮತ್ತು ಅರಿಶಿನ ಪುಡಿ ಮತ್ತು ಶುಂಠಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಕಷಾಯವನ್ನು ತಯಾರಿಸುವಾಗ, ಪಾತ್ರೆಗೆ ಎರಡು ಲೋಟ ನೀರು ಹಾಕಿ, ಕುದಿಸಿದ ನಂತರ ಕಷಾಯ ಪುಡಿಯನ್ನು ಸೇರಿಸಿ ಮತ್ತು ಕುದಿಯಲು ಬಿಡಿ. ಈ ಕಷಾಯಕ್ಕೆ ನೀವು ಹಾಲು ಮತ್ತು ನೀರನ್ನು ಕೂಡ ಸೇರಿಸಬಹುದು.