ಬೇಕಾಗುವ ಸಾಮಗ್ರಿಗಳು:
ರಾಗಿ ಹಿಟ್ಟು-ಅರ್ಧ ಕಪ್, ಹಾಲು-2 ಕಪ್, ಬೆಲ್ಲ-3 ಟೇಬಲ್ ಸ್ಪೂನ್, ಖರ್ಜೂರ-8, ಬಾದಾಮಿ ಹಾಗೂ ಗೋಡಂಬಿ- ಸ್ವಲ್ಪ, ಏಲಕ್ಕಿ ಪುಡಿ- 14 ಟೀ ಸ್ಪೂನ್, ನೀರು-2 1½ ಕಪ್.
ಮಾಡುವ ವಿಧಾನ:
ಮೊದಲು ಹಾಲನ್ನು ಕುದಿಸಿ. 3/4 ಕಪ್ ಹಾಲು ತೆಗೆದುಕೊಳ್ಳಿ, ಖರ್ಜೂರವನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಕುದಿಯಲು ಬಿಡಿ. ರಾಗಿ ಹಿಟ್ಟು ಹಾಕಿ ಅದಕ್ಕೆ ¾ ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 3/4 ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಾಲಿನಲ್ಲಿ ನೆನೆಸಿದ ಖರ್ಜೂರವನ್ನು ಬ್ಲೆಂಡರ್‌ನಲ್ಲಿ ಮ್ಯಾಶ್ ಮಾಡಿ ಮತ್ತು ಪಾತ್ರೆಯನ್ನು ಪಕ್ಕಕ್ಕೆ ಇರಿಸಿ.
ಒಂದು ಪ್ಯಾನ್ ಗೆ ರಾಗಿ ಹಿಟ್ಟಿನ ಮಿಶ್ರಣ ಹಾಗೂ 2 ಕಪ್ ನೀರು ಹಾಕಿ ಬೇಯಿಸಿಕೊಳ್ಳಿ. ಇದು ಬೇಯುತ್ತಿದ್ದಂತೆ ಬೆಲ್ಲ, ರುಬ್ಬಿಕೊಂಡ ಖರ್ಜೂರದ ಮಿಶ್ರಣ, ಕಾಯಿಸಿಕೊಂಡ ಹಾಲು ಹಾಕಿ ಇದು ದಪ್ಪಗಿನ ಮಿಶ್ರಣ ಆಗುವವರೆಗೆ ಮಿಕ್ಸ್ ಮಾಡಿ. ದಪ್ಪಗಿನ ಮಿಶ್ರಣ ಇಷ್ಟವಿಲ್ಲದಿದ್ದರೆ ತುಸು ಹಾಲು ಸೇರಿಸಿಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿ ಹಾಕಿ ಈಗ ಮಾಲ್ಟ್ ಸವಿಯಲು ಸಿದ್ದ.