ಆರೋಗ್ಯ ಕಾಪಾಡಿಕೊಳ್ಳಲು ತರಕಾರಿ ಆಧಾರಿತ ಖಾದ್ಯಗಳನ್ನು ಸೇವಿಸುವುದು ಅತ್ಯಂತ ಮುಖ್ಯ. ಅದರಲ್ಲಿ ಬ್ರೊಕೊಲಿ ಪ್ರಮುಖ ಪೌಷ್ಠಿಕಾಂಶಗಳಿಂದ ಕೂಡಿರುವ ತರಕಾರಿಯಾಗಿದೆ. ಇದರಲ್ಲಿ ಫೈಬರ್, ವಿಟಮಿನ್ ಹಾಗೂ ದೇಹಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳಿದ್ದು, ನಿಯಮಿತವಾಗಿ ಇದನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಬ್ರೊಕೊಲಿಯಿಂದ ಹಲವು ಖಾದ್ಯಗಳನ್ನು ತಯಾರಿಸಬಹುದಾದರೂ, ತ್ವರಿತವಾಗಿ ಸವಿಯಬಹುದಾದ ಸಲಾಡ್ ಕೂಡ ಜನಪ್ರಿಯವಾಗಿದೆ.
ಬೇಕಾಗುವ ಪದಾರ್ಥಗಳು
ಬ್ರೊಕೊಲಿ – ½ ಬಟ್ಟಲು
ಬೇಯಿಸಿದ ಆಲೂಗಡ್ಡೆ – ಸ್ವಲ್ಪ
ಈರುಳ್ಳಿ – 1 (ಸಣ್ಣಗೆ ಹೆಚ್ಚಿದದ್ದು)
ಹುರಿದ ಕಡಲೆಕಾಯಿ ಬೀಜ / ಬಾದಾಮಿ – 2 ಚಮಚ
ಚೀಸ್ – 2 ಚಮಚ
ಕಾಳು ಮೆಣಸಿನ ಪುಡಿ – ¼ ಚಮಚ
ಪುದೀನಾ ಸೊಪ್ಪು – ಸ್ವಲ್ಪ
ಕೊತ್ತಂಬರಿ ಸೊಪ್ಪು – ಸ್ವಲ್ಪ
ನಿಂಬೆ ರಸ – 1 ಚಮಚ
ಮಯೋನೀಸ್ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಬ್ರೊಕೊಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಸ್ವಚ್ಛವಾಗಿ ತೊಳೆದುಕೊಳ್ಳಿ.ನಂತರ ಬಿಸಿ ನೀರಿನಲ್ಲಿ 5 ನಿಮಿಷ ಬೇಯಿಸಿ, ನಂತರ ನೀರನ್ನು ಬಸಿದುಕೊಳ್ಳಿ.
ಈಗ ಒಂದು ಬಟ್ಟಲಿನಲ್ಲಿ ಬೇಯಿಸಿದ ಬ್ರೊಕೊಲಿ, ಅದಕ್ಕೆ ಬೇಯಿಸಿದ ಆಲೂಗಡ್ಡೆ, ಈರುಳ್ಳಿ, ಕಡಲೆಕಾಯಿ ಬೀಜ ಅಥವಾ ಬಾದಾಮಿ ಸೇರಿಸಿ. ನಂತರ ಚೀಸ್, ಕಾಳು ಮೆಣಸಿನ ಪುಡಿ, ಪುದೀನಾ, ಕೊತ್ತಂಬರಿ, ನಿಂಬೆ ರಸ ಹಾಗೂ ಮಯೋನೀಸ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿದರೆ ಬ್ರೊಕೊಲಿ ಸಲಾಡ್ ರೆಡಿ.