ಸಿಹಿ ತಿನ್ನಬೇಕು ಅನ್ನೋ ಆಸೆ ಇದ್ದರೂ ಆರೋಗ್ಯದ ಚಿಂತೆಯಿಂದ ಬೇಡ ಅನ್ನೋರೆ ಹೆಚ್ಚು. ಅಂಥವರಿಗೆ ಇದು ಪರ್ಫೆಕ್ಟ್ ಆಯ್ಕೆ. ಸಕ್ಕರೆ ಕಡಿಮೆ, ಪೌಷ್ಟಿಕಾಂಶ ಹೆಚ್ಚು ಇರುವ ಓಟ್ಸ್ ಬರ್ಫಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಆರೋಗ್ಯಕರ ಸ್ನ್ಯಾಕ್.
ಬೇಕಾಗುವ ಸಾಮಗ್ರಿಗಳು
ಓಟ್ಸ್ – 1 ಕಪ್
ತುಪ್ಪ – 2 ಟೇಬಲ್ ಸ್ಪೂನ್
ಹಾಲು – ½ ಕಪ್
ಬೆಲ್ಲ ಪುಡಿ / ಸಕ್ಕರೆ – ½ ಕಪ್
ಏಲಕ್ಕಿ ಪುಡಿ – ½ ಟೀ ಸ್ಪೂನ್
ಕಾಜು, ಬಾದಾಮಿ (ಸಣ್ಣ ತುಂಡು) – 2 ಟೇಬಲ್ ಸ್ಪೂನ್
ತೆಂಗಿನ ತುರಿ – 2 ಟೇಬಲ್ ಸ್ಪೂನ್
ತಯಾರಿಸುವ ವಿಧಾನ
ಮೊದಲು ಓಟ್ಸ್‌ನ್ನು ತವದಲ್ಲಿ ಸ್ವಲ್ಪ ಡ್ರೈ ರೋಸ್ಟ್ ಮಾಡಿ ತಣ್ಣಗಾಗಲು ಬಿಡಿ. ನಂತರ ಮಿಕ್ಸಿಯಲ್ಲಿ ಹಾಕಿ ಒರಟಾಗಿ ಪುಡಿಯಾಗಿ ಮಾಡಿಕೊಳ್ಳಿ.
ಒಂದು ತವಾದಲ್ಲಿ ತುಪ್ಪ ಬಿಸಿ ಮಾಡಿ, ಕಾಜು–ಬಾದಾಮಿಯನ್ನು ಹುರಿದು ತೆಗೆದಿಡಿ. ಅದೇ ತವಾದಲ್ಲಿ ಓಟ್ಸ್ ಪುಡಿ ಹಾಕಿ ಕಡಿಮೆ ಬೆಂಕಿಯಲ್ಲಿ ಹುರಿಯಿರಿ. ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಕಲಸಿ. ನಂತರ ಬೆಲ್ಲ ಪುಡಿ ಅಥವಾ ಸಕ್ಕರೆ ಹಾಕಿ ಮಿಶ್ರಣ ಗಟ್ಟಿಯಾಗುವವರೆಗೆ ಕಲಸುತ್ತಿರಿ. ಈಗ ಏಲಕ್ಕಿ ಪುಡಿ, ಹುರಿದ ಡ್ರೈಫ್ರೂಟ್ಸ್ ಸೇರಿಸಿ ಒಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಒಂದು ಪ್ಲೇಟ್‌ಗೆ ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ಸಮವಾಗಿ ಒತ್ತಿ. ತಣ್ಣಗಾದ ಬಳಿಕ ಚೌಕಾಕಾರವಾಗಿ ಕತ್ತರಿಸಿ.


