ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್‌ಗೆ 6 ವಾರಗಳ ಕಾಲ ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್‌ಗೆ ಬೇಲ್ ಸಿಕ್ಕಿದ್ದಕ್ಕೆ ಈಗ ಮನಸ್ಸು ನಿರಾಳ ಆಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ದರ್ಶನ್ ಜಾಮೀನು ಸುದ್ದಿ ಕೇಳಿ ಈಗ ಮನಸ್ಸು ನಿರಾಳ ಆಗುತ್ತಿದೆ. ಅವರಿಗೆ ಆರೋಗ್ಯ ಸಮಸ್ಯೆ ಇತ್ತು. ಹಾಗಾಗಿ ನಿರಾಳ, ಬೇರೆ ಯಾವದ್ದಕ್ಕೂ ಅಲ್ಲ. ಅವರು ಆರೋಪಿಯಷ್ಟೇ ಅಪರಾಧಿ ಅಲ್ಲ. ಮುಂದೆ ಅವರು ನಿರಪರಾಧಿ ಆಗಿ ಬಂದ್ಮೇಲೆ ಅನಾರೋಗ್ಯ ಸಮಸ್ಯೆಯಿಂದ ತೊಂದರೆ ಆಗಬಾರದು ಅಲ್ವೇ? ಎಂದಿದ್ದಾರೆ. ವಿಜಯಲಕ್ಷ್ಮಿ ಅತ್ತಿಗೆ ಬಹಳ ಕಷ್ಟಪಟ್ಟಿದ್ದಾರೆ. ಅವರ ಕಷ್ಟಕ್ಕೂ ದೇವರು ಸ್ಪಂದಿಸಿರಬಹುದು ಎಂದು ತರುಣ್ ಹೇಳಿದ್ದಾರೆ.