ಪ್ರಯಾಣದ ಮಧ್ಯದಲ್ಲೇ ಹೃದಯಾಘಾತ: 40 ಜನರ ಪ್ರಾಣ ಉಳಿಸಿ ಮೃತಪಟ್ಟ ಬಸ್ ಚಾಲಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯಲ್ಲಿ ಬಸ್‌ ಚಲಾಯಿಸುತ್ತಿದ್ದ ಚಾಲಕನೊಬ್ಬನಿಗೆ ಪ್ರಯಾಣದ ಮಧ್ಯದಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ.

ರೇಪಲ್ಲೆಯಿಂದ ಚಿರಾಳಕ್ಕೆ ಬಸ್ ಚಲಾಯಿಸುತ್ತಿದ್ದಾಗ ಹೃದಯಾಘಾತದಿಂದ ಎಪಿಎಸ್‌ಆರ್‌ಟಿಸಿ ಬಸ್ ಚಾಲಕ ಡಿ.ಸಾಂಬಶಿವ ರಾವ್ ಅವರು ಮೃತಪಟ್ಟಿದ್ದಾರೆ. ಬಾಪಟ್ಲಾ ಡಿಪೋಗೆ ಸೇರಿದ ಬಸ್ ಚಾಲಕನಿಗೆ ಹೃದಯಾಘಾತವಾದಾಗ ನಿಯಂತ್ರಣ ತಪ್ಪಿದೆ. ನಂತರ ರಸ್ತೆಯಿಂದ ಆಚೆ ಇರುವ ಪಕ್ಕದ ಹೊಲದಲ್ಲಿ ಹೂತು ನಿಂತಿದೆ.

ಬಸ್ ಪಲ್ಟಿಯಾಗುತ್ತಿದ್ದಂತೆ ಅದೇ ಸಮಯಕ್ಕೆ ಅದೇ ಮಾರ್ಗದಲ್ಲಿ ಒಂದು ಬೈಕ್‌ ಬಂದಿದ್ದು, ಬೈಕ್ ಸವಾರ ಪಿಟ್ಟಾ ವೆಂಕಟೇಶ್ವರ ರೆಡ್ಡಿ ಎಂಬುವವರಿಗೆ ಡಿಕ್ಕಿ ಹೊಡೆದು ಅವರಿಗೆ ತೀವ್ರ ಗಾಯವಾಗಿದೆ. ಬಸ್‌ ನಲ್ಲಿ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯವಾದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತವಾದಾಗ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರು. ಗಾಯ ಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ಸಹಾಯ ಮಾಡಿದರು. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!