ಹೊಸದಿಗಂತ ವರದಿ, ಮಡಿಕೇರಿ:
ಅಧಿಕಾರಿಯೊಬ್ಬರು ಕಾರಿನಲ್ಲೇ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ ಘಟನೆ ಶುಕ್ರವಾರ ಸಂಜೆ ನಡೆದಿದೆ
ಮೂಲತಃ ಬೆಂಗಳೂರಿನವರಾಗಿದ್ದು, ಪ್ರಸಕ್ತ ಕೊಡಗಿನ ತಿತಿಮತಿಯಲ್ಲಿ ಕುಟುಂಬ ಸಹಿತ ವಾಸವಿದ್ದ ಮನಮೋಹನ್ (46) ಸಾವಿಗೀಡಾದವರು.
ಶುಕ್ರವಾರ ಸಂಜೆ 4ಗಂಟೆ ಸುಮಾರಿಗೆ ತಿತಿಮತಿಯಿಂದ ಪಿರಿಯಾಪಟ್ಟಣಕ್ಕೆ ತನ್ನ ಆಲ್ಟೋ ಕಾರಿನಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದಾಗ ಬೂದಿತಿಟ್ಟು ಬಳಿ ಈ ದುರ್ಘಟನೆ ನಡೆದಿದೆ.
ಈ ಹಿಂದೆ ಕೊಡಗಿನ ಪೊನ್ನಪ್ಪ ಸಂತೆ, ನಿಟ್ಟೂರು, ಬಾಳಲೆ, ಸೋಮವಾರಪೇಟೆ, ಸಿದ್ದಾಪುರ ಪಂಚಾಯತ್’ಗಳಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಮನಮೋಹನ್ ಅವರು ಕಳೆದ ಒಂದೂವರೆ ತಿಂಗಳಿನಿಂದ ಪೊನ್ನಂಪೇಟೆ ತಾಲೂಕು ಪಂಚಾಯಿತಿಯಲ್ಲಿ ಪ್ರಭಾರ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.