ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರಿಷ್ಠ ತಾಪಮಾನದಿಂದಾಗಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಮೆಕ್ಸಿಕೋ ದೇಶದ ಕೆಲವು ಭಾಗಗಳಲ್ಲಿ ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಕಳೆದ ಎರಡು ವಾರಗಳಲ್ಲಿ ಕನಿಷ್ಠ 100 ಜನರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.
ಈ ತಿಂಗಳಲ್ಲಿ ಶಾಖದ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಜೂನ್ 18 ರಿಂದ 24ರ ಅವಧಿಯಲ್ಲಿ ಮೂರನೇ ಎರಡರಷ್ಟು ಸಾವುಗಳು ಸಂಭವಿಸಿವೆ, ಉಳಿದವು ಹಿಂದಿನ ವಾರದಲ್ಲಿ ಸಂಭವಿಸಿದೆ ಎಂದು ಸಚಿವಾಲಯವು ತೀವ್ರ ತಾಪಮಾನದ ವರದಿಯಲ್ಲಿ ತಿಳಿಸಿದೆ.
ಬಹುತೇಕ ಎಲ್ಲಾ ಸಾವುಗಳು ಹೀಟ್ ಸ್ಟ್ರೋಕ್ ನಿಂದಾಗಿದ್ದು, ಬೆರಳೆಣಿಕೆಯಷ್ಟು ನಿರ್ಜಲೀಕರಣದಿಂದ ಸಂಭವಿಸಿದೆ. ಸುಮಾರು 64% ರಷ್ಟು ಸಾವಿನ ಪ್ರಕರಣಗಳು ಟೆಕ್ಸಾಸ್‌ನ ಗಡಿಯಲ್ಲಿರುವ ಉತ್ತರ ರಾಜ್ಯವಾದ ನ್ಯೂವೊ ಲಿಯಾನ್‌ನಲ್ಲಿ ಸಂಭವಿಸಿವೆ. ಉಳಿದವುಗಳಲ್ಲಿ ಹೆಚ್ಚಿನವು ಗಲ್ಫ್ ಕರಾವಳಿಯ ನೆರೆಯ ತಮೌಲಿಪಾಸ್ ಮತ್ತು ವೆರಾಕ್ರಜ್‌ನಲ್ಲಿ ಸಂಭವಿಸಿವೆ.