ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ವಿಧಾನ ಪರಿಷತ್‌ನಲ್ಲಿ ಮದ್ಯಪಾನದ ಬಗ್ಗೆ ಬಿಸಿ ಬಿಸಿ ಚರ್ಚೆ ಆಗಿದೆ.
ಮದ್ಯಪ್ರಿಯರ ಅನಾರೋಗ್ಯ ಚಿಕಿತ್ಸೆಗೆ ಹಣ ಮೀಸಲಿಡಿ ಎಂದು ವಿಧಾನ ಪರಿಷತ್‌ನಲ್ಲಿ ಎಂಎಲ್ಸಿ ರವಿಕುಮಾರ್ ಪ್ರಸ್ತಾಪಿಸಿದ್ದಾರೆ. ಮದ್ಯ ಸೇವನೆಯಿಂದ ಜಾಂಡಿಸ್, ಲಿವರ್ ಡ್ಯಾಮೆಜ್ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗುತ್ತಿದೆ. ಸರ್ಕಾರಕ್ಕೆ ಬರುವ ಬರುವ ಆದಾಯದಲ್ಲಿ ಶೇ.20 ರಷ್ಟು ಹಣವನ್ನು ಮದ್ಯಪ್ರಿಯರ ಅನಾರೋಗ್ಯ ಚಿಕಿತ್ಸೆಗೆ ಮೀಸಲಿಡಿ ಎಂದು ಎಂಎಲ್ಸಿ ರವಿಕುಮಾರ್ ಒತ್ತಾಯಿಸಿದ್ದಾರೆ.
ಸೋಮವಾರ ವಿಧಾನ ಪರಿಷತ್‌ನಲ್ಲಿ ಮದ್ಯಪಾನ ಸೇವನೆಯಿಂದ ಲೀವರ್ ಡ್ಯಾಮೇಜ್, ಜಾಂಡಿಸ್ ಖಾಯಿಲೆಗೆ ತುತ್ತಾಗುವ ವಿಚಾರವನ್ನ ನಿಯಮ 330ರಅಡಿಯಲ್ಲಿ ಪ್ರಸ್ತಾಪಿಸಿದ ಎಂಎಲ್ಸಿ ರವಿಕುಮಾರ್, ಮದ್ಯಸೇವನೆಯಿಂದ ಶೇ.3 ರಷ್ಟು ಜನರು ರೋಗಕ್ಕೆ ತುತ್ತಾಗುತ್ತಿದ್ಧಾರೆ. ಮದ್ಯ ಸೇವನೆಯಿಂದ ಜಾಂಡಿಸ್, ಲಿವರ್ ಡ್ಯಾಮೇಜ್ ಚಿಕಿತ್ಸೆಗೆ ಹೆಚ್ಚು ಖರ್ಚಾಗುತ್ತಿದೆ. ಜಾಂಡಿಸ್ನಿಂದ ಮದ್ಯಪ್ರಿಯರು ಬೇಗ ಸಾಯುತ್ತಿದ್ದಾರೆ, ರೋಗದ ಚಿಕಿತ್ಸೆಗೆ ಸರಕಾರ ಹಣ ನೀಡಿದ್ರೆ ಹೆಚ್ಚು ಕುಡಿಯಲುಬಹುದು, ಸರ್ಕಾರ ಹೆಚ್ಚು ಆದಾಯ ಪಡೆಯಬಹುದು ಎಂದು ಹೇಳಿದರು.
ಮದ್ಯ ಸೇವನೆ ಮಾಡುವುದರಿಂದ ಶೇ. 2ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ಧಾರೆ, ದೇಶದಲ್ಲಿ 15ಲಕ್ಷ ಜನರು ಮೃತಪಟ್ಟಿದ್ದಾರೆ. ಐದರಲ್ಲಿ ಓರ್ವ ಮದ್ಯ ಸೇವನೆ ಮಾಡಿ ಜಾಂಡಿಸ್ ಖಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಮದ್ಯಸೇವನೆ ಮಾಡುವವರಿಗೆ ಚಿಕಿತ್ಸೆ ಕೊಡಬೇಕು, ಗ್ಯಾರಂಟಿಗಳು ನಡೆಯುತ್ತಿರುವುದು ಮದ್ಯಪ್ರಿಯರಿಂದ, ಸರ್ಕಾರಕ್ಕೆ ಮದ್ಯ ಪ್ರಿಯರ ಯೋಗದಾನ ಹೆಚ್ಚಿದೆ, ಆದಾಯದಲ್ಲಿ ರೋಗದ ಚಿಕಿತ್ಸೆಗೆ ಶೇ. 20ರಷ್ಟು ಮೀಸಲಿಡಿ ಎಂದು ಎಂಎಲ್ಸಿ ರವಿಕುಮಾರ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

