ದಿನಭವಿಷ್ಯ: ಉದ್ಯೋಗದಲ್ಲಿ ಭಾರೀ ಒತ್ತಡ, ತಾಳ್ಮೆಯಿದ್ದಷ್ಟು ಒಳ್ಳೆಯದು!

ಮಂಗಳವಾರ, 31 ಜನವರಿ2023, ಮಂಗಳೂರು

ಮೇಷ
ಯಶಸ್ವೀ ದಿನ. ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ಕೌಟುಂಬಿಕ ಬೆಳವಣಿಗೆ ತೃಪ್ತಿಕರ ಅಂತ್ಯ ಕಾಣುವುದು.

ವೃಷಭ
ಉದ್ಯೋಗದಲ್ಲಿ ಅಧಿಕ ಒತ್ತಡ. ನೀವಿಂದು ಹೆಚ್ಚು ತಾಳ್ಮೆಯಿಂದ ವರ್ತಿಸಬೇಕು. ಸುಲಭದಲ್ಲಿ ಹಣ ಗಳಿಸುವ ಆಮಿಷಕ್ಕೆ ಬಲಿಯಾಗಬೇಡಿ.

ಮಿಥುನ
ಮನದೊಳಗಿನ ಉದ್ವಿಗ್ನತೆಯು ಇಂದು ಒಮ್ಮೆಗೆ ಶಮನ ಆಗುವುದು. ನಿರಾಳತೆ ಲಭಿಸುವುದು. ನಿಮ್ಮ ನಿರೀಕ್ಷೆ ಈಡೇರುವುದು ಅದಕ್ಕೆ ಕಾರಣ.

ಕಟಕ
ಉತ್ಸಾಹಪೂರ್ಣ ದಿನ. ನಿಮ್ಮ ಉತ್ಸಾಹವನ್ನು ಫಲಪ್ರದ ಕಾರ್ಯಗಳಿಗೆ ಮೀಸಲಿಡಿ. ಖರ್ಚು ಅಧಿಕವಾದೀತು. ಕಾಲು ನೋವಿನಂತಹ ಸಮಸ್ಯೆ ಕಾಡಬಹುದು.

ಸಿಂಹ
ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವುದನ್ನು ನಿವಾರಿಸಲು ಆದ್ಯತೆ ಕೊಡಿ. ಪರಸ್ಪರ ಮಾತು ಆಲಿಸುವುದು ಅದಕ್ಕೆ ಉತ್ತಮ ದಾರಿ.

ಕನ್ಯಾ
ನಿಮ್ಮ ಕೆಲವು ನಿಲುವು ಟೀಕೆ ಎದುರಿಸುತ್ತವೆ. ನಿಮ್ಮ ಧೋರಣೆ ಬದಲಿಸಬೇಕಾದ ಪ್ರಸಂಗ ಒದಗುವುದು. ಅದನ್ನು ವಿವಾದವಿಲ್ಲದೆ ಒಪ್ಪಿಕೊಳ್ಳಿ.

ತುಲಾ
ಎಲ್ಲ ಕಾರ್ಯಗಳಲ್ಲಿ ಯಶಸ್ಸು. ವೃತ್ತಿಯ ವ್ಯವಹಾರ ಸಲೀಸು. ಕೌಟುಂಬಿಕ ಒತ್ತಡಗಳು ಕಡಿಮೆಯಾಗುವವು. ಆರ್ಥಿಕ ಉನ್ನತಿಯ ದಾರಿ ತೋರುವುದು.

ವೃಶ್ಚಿಕ
ಪ್ರತೀ ವಿಷಯದಲ್ಲೂ ಇಂದು ನಿಮಗೆ ಮಹತ್ವದ ದಿನ. ಉದ್ಯೋಗದಲ್ಲಿ ಮತ್ತು ಕೌಟುಂಬಿಕ ಬದುಕಿನಲ್ಲಿ ಮಹತ್ತರವಾದುದನ್ನು ಸಾಧಿಸುವಿರಿ.

ಧನು
ಆರೋಗ್ಯದ ಕುರಿತು ಗಮನ ಕೊಡಿ. ಸಣ್ಣಪುಟ್ಟ ಸಮಸ್ಯೆ ದೊಡ್ಡದಾಗಿ ಬೆಳೆಯಲು ಅವಕಾಶ ಕೊಡಬೇಡಿ. ಬಂಧುಗಳಿಂದ ಅಸಹಕಾರ.

ಮಕರ
ನಿಮ್ಮ ಕೆಲಸವು ಕೆಟ್ಟ ಫಲಿತಾಂಶ ನೀಡದಂತೆ ಎಚ್ಚರ ವಹಿಸಿ. ಕೆಲವರ ಹಸ್ತಕ್ಷೇಪ ಕೆಲಸವನ್ನೆ ಕೆಡಿಸಬಹುದು. ಹಿರಿಯರ ಕಿವಿಮಾತು ನಿರ್ಲಕ್ಷಿಸಬೇಡಿ.

ಕುಂಭ
ಸಂಬಂಧದಲ್ಲಿ ಮೂಡಿದ್ದ ತಪ್ಪುಕಲ್ಪನೆ, ಒತ್ತಡ ನಿವಾರಣೆ ಕಾಣುವುದು. ತುರ್ತು ಕಾರ್ಯ ಪೂರೈಸಲು ಪ್ರಾಮುಖ್ಯತೆ ಕೊಡಿ. ಇನ್ನಷ್ಟು ವಿಳಂಬ ಮಾಡಬೇಡಿ.

ಮೀನ
ಅನಿರೀಕ್ಷಿತ ಖರ್ಚು ಒದಗಿಬರುವುದು. ಅದನ್ನು ತಪ್ಪಿಸುವುದು ನಿಮ್ಮಿಂದಾಗದು. ವೃತ್ತಿಯಲ್ಲಿ ಅಸಹಕಾರ ಎದುರಿಸುವಿರಿ. ಮನಶ್ಯಾಂತಿ ದೂರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!