ಹೊಸದಿಗಂತ ವರದಿ,ಕಲಬುರಗಿ:
ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಗ್ರಾಮದ ಕಾಗಿಣಾ ತಟದಲ್ಲಿರುವ ಉತ್ತರಾಧಿ ಮಠವು ಸಂಪೂರ್ಣ ಜಲಾವೃತವಾಗಿ ಮುಳುಗಡೆಯಾಗಿದೆ.
ಕಳೆದ ಎರಡು ದಿನಗಳಿಂದ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು,ಕಾಗಿಣಾ ನದಿಯ ತಟದಲ್ಲಿನ ಜಯತೀರ್ಥರ ಮೂಲ ಬೃಂದಾವನವಾದ ಉತ್ತರಾಧಿ ಮಠ ಸಂಪೂರ್ಣ ನೀರಿನೊಳಗೆ ಮುಳುಗಿ ಹೋಗಿದೆ.
ಇನ್ನೂ ಜಯತೀರ್ಥರ ಮೂಲ ಬೃಂದಾವನ ನೀರಿನಲ್ಲಿ ಮುಳುಗಿ ಹೋಗಿದ್ದರಿಂದ ನದಿಯಲ್ಲಿ ಈಜಾಡಿಕೊಂಡೆ ಹೋಗಿ ಮಠದ ಅರ್ಚಕರು ದಿನನಿತ್ಯದ ಪೂಜೆ ಕಾರ್ಯಕ್ರಮ ಮುಗಿಸಿಕೊಂಡು ಬಂದಿದ್ದಾರೆ.