September 10, 2026
Thursday, September 10, 2026
spot_img

ಚಿಕ್ಕಮಗಳೂರಿನಲ್ಲಿ ಹರುಷ ತಂದ ವರ್ಷಧಾರೆ, ಕಾಫಿನಾಡಿನ ಬೆಳೆಗಾರರು ಫುಲ್‌ ಖುಷ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಲವು ದಿನಗಳಿಂದ ಬಿಸಿಲು ಕಂಡಿದ್ದ ಚಿಕ್ಕಮಗಳೂರು ಜನತೆಗೆ ಇದೀಗ ಜೋರು ಮಳೆಯ ದರುಶನವಾಗಿದೆ.

ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಸಂತಸವಾಗಿದ್ದು, ಕೆಲಸ ಚುರುಕಾಗಿದೆ. ಚಿಕ್ಕಮಗಳೂರು ತಾಲೂಕಿನ ಬಹುತೇಕ ಊರುಗಳಲ್ಲಿ ಮಳೆ ಚೆನ್ನಾಗಿ ಬಿದ್ದಿದೆ. ಇದರಿಂದಾಗಿ ಒಣಗಿಹೋಗುತ್ತಿದ್ದ ಕಾಫಿ ತೋಟಗಳಿಗೆ ಜೀವಕಳೆ ಬಂದಿದೆ.

ಕಾಫಿ ಬೆಳೆಗೆ ಬಿಸಿಲಿನಲ್ಲಿ ಬರುವ ಬೋರರ್‌ ರೋಗ ನಿಯಂತ್ರಣಕ್ಕೆ ಮಳೆ ಸಹಕಾರಿಯಾಗಲಿದೆ ಎಂದು ಬೆಳೆಗಾರರು ಸಂತಸದಲ್ಲಿದ್ದಾರೆ. ಬರೀ ಮಳೆ ಬೆಳವಣಿಗೆಗೆ ಸಹಕಾರಿ ಆದರೆ ಆಲಿಕಲ್ಲು ಮಳೆಯಿಂದ ಬೆಳೆ ಹಾಳಾಗುತ್ತದೆ. ಆಲಿಕಲ್ಲು ಇಲ್ಲದೆ ಬರೀ ಮಳೆ ಬಿದ್ದರೆ ಸಾಕು ಎಂದು ಬೆಳೆಗಾರರು ಹೇಳುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !