WEATHER | ಕರ್ನಾಟಕದ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಜೂ.19ರವರೆಗೆ ಭಾರಿ ಮಳೆ, ಚಳಿಗಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದೆ ಆದರೂ ಮಳೆಯ ಪ್ರಮಾಣ ಕಡಿಮೆ ಇದೆ. ಕಳೆದ ಎರಡು ದಿನಗಳಿಂದ ಮತ್ತೆ ಮಳೆ ಚುರುಕುಗೊಂಡಿದೆ. ಜೂನ್ 19ರವರೆಗೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್​, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಚಿಕ್ಕಮಗಳೂರು,ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​, ವಿಜಯನಗರ, ತುಮಕೂರು, ಶಿವಮೊಗ್ಗ, ಬಳ್ಳಾರಿ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಶಕ್ತಿನಗರ, ಮಂಗಳೂರು, ಕೊಟ್ಟಿಗೆಹಾರ, ಬಂಟವಾಳ, ಬೆಳ್ತಂಗಡಿ, ಮೂಡುಬಿದಿರೆ, ಭಾಗಮಂಡಲದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಉಪ್ಪಿನಂಗಡಿ, ಮಾಣಿ, ಕ್ಯಾಸಲ್​ರಾಕ್, ಮಂಕಿ, ಕದ್ರಾ, ಧರ್ಮಸ್ಥಳ, ಅಂಕೋಲಾ, ಸುಳ್ಯ, ಉಡುಪಿ, ಕಾರ್ಕಳ, ಪುತ್ತೂರು, ಲೋಂಡಾ,ಆಗುಂಬೆಯಲ್ಲಿ ಮಳೆಯಾಗಿದೆ.

ಗೇರುಸೊಪ್ಪ, ಮುಲ್ಕಿ, ಕುಂದಾಪುರ, ಕೋಟಾ, ಕಾರವಾರ, ಹೊನ್ನಾವರ, ಶೃಂಗೇರಿ, ನಾಪೋಕ್ಲು, ಸೋಮವಾರಪೇಟೆ, ಕುಮಟಾ, ಬೆಳಗಾವಿ, ಕಳಸ, ಖಾನಾಪುರ, ಕಿತ್ತೂರು,ಕೊಪ್ಪ, ಜಯಪುರ, ಹಳಿಯಾಳ, ಕಮ್ಮರಡಿ, ಪೊನ್ನಂಪೇಟೆ, ಬೇಲೂರು, ಹೊಸಕೋಟೆ, ಜೇವರಗಿ, ಹಾರಂಗಿ, ಸಂಕೇಶ್ವರ, ಹುಕ್ಕೇರಿ, ವಿಜಯಪುರ, ಬೈಲಹೊಂಗಲ, ಬಬಲೇಶ್ವರದಲ್ಲಿ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!