WEATHER | ಬೆಂಗಳೂರು ಸೇರಿ ಕರ್ನಾಟಕದ 18 ಜಿಲ್ಲೆಗಳಲ್ಲಿ ಧಾರಾಕಾರ ಮಳೆ, ಆರೆಂಜ್ ಅಲರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರು ಸೇರಿ ಕರ್ನಾಟಕದ 18ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಭಾನುವಾರ ಕೂಡ ಬೆಂಗಳೂರಿನಲ್ಲಿ ವಿಪರೀತ ಮಳೆ ಸುರಿದಿದ್ದು, ಎಲ್ಲೆಡೆ ನೀರು ನಿಂತಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಹೆಚ್ಚು ಮಳೆಯಾಗಲಿದ್ದು ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ಒಟ್ಟಿನಲ್ಲಿ ಮೇ 24ರವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ.

ಮಂಕಿ, ಹೊನ್ನಾವರ, ಪುತ್ತೂರು, ಅಂಕೋಲಾ, ಕ್ಯಾಸಲ್ ರಾಕ್, ಕುಮಟಾ, ಹುನಗುಂದ, ಖಾನಾಪುರ, ಅಫ್ಜಲ್​ಪುರ, ಹುಬ್ಬಳ್ಳಿ, ಅಣ್ಣಿಗೆರೆ, ಹುಮ್ನಾಬಾದ್, ಗುರುಮಿಟ್ಕಲ್, ಹಿಡಕಲ್, ಸಂಕೇಶ್ವರ, ಶಿಗ್ಗಾಂವ್, ಜೇವರಗಿ, ಕಲಬುರಗಿಯಲ್ಲಿ ಮಳೆಯಾಗಿದೆ. ಜಗಳೂರು, ಕೊಟ್ಟಿಗೆಹಾರ, ವೈಎನ್ ಹೊಸಕೋಟೆ, ಚಿಕ್ಕಮಗಳೂರು, ಮದ್ದೂರು, ಕೊಬ್ಬನಹಳ್ಳಿ, ನಾಯಕನಹಟ್ಟಿ, ಚನ್ನಗಿರಿ, ನಾಗಮಂಗಲ, ಸಿರಾ, ಕುಣಿಗಲ್, ಅಜ್ಜಂಪುರ, ಬೇಲೂರು, ಮೈಸೂರು, ಭದ್ರಾವತಿ, ಜಯಪುರ, ಪರಶುರಾಂಪುರ, ನಾಪೋಕ್ಲುವಿನಲ್ಲಿ ಮಳೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!