ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಮಳೆ ಸಂಬಂಧಿತ ಅವಗಢದಲ್ಲಿ ಚಿಕ್ಕಮಗಳೂರಿನಲ್ಲಿ ವೃದ್ಧೆ ಮೃತಪಟ್ಟಿದ್ದಾರೆ.
ಸಖರಾಯಪಟ್ಟಣ ಸಮೀಪದ ಹೊಸಸಿದ್ರಳ್ಳಿ ಗ್ರಾಮದಲ್ಲಿ ರಾಯಮ್ಮ ಎನ್ನುವವರು ಮುಳುಗಡೆಯಾಗಿದ್ದ ಅಡಿಕೆ ತೋಟ ನೋಡಲು ಹೋಗಿದ್ದರು. ಆದರೆ ವಾಪಾಸ್ ಬರಲಿಲ್ಲ.
ನಂತರ ಕುಟುಂಬದವರು ಆಕೆಯನ್ನು ಹುಡುಕುತ್ತಾ ಬಂದಾಗ ಅವರ ಉರುಗೋಲು ಮಾತ್ರ ಸಿಕ್ಕಿದೆ. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದಾಗ ರಾಮಮ್ಮ ಅವರ ಶವ ಪತ್ತೆಯಾಗಿದೆ.