ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡದಲ್ಲಿ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೇಗೂರು ಗ್ರಾಮದಲ್ಲಿ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ 24 ಮಕ್ಕಳು ಸೇಫ್ ಆಗಿದ್ದಾರೆ. ಸರ್ಕಾರಿ ಶಾಲೆಯ ಕಟ್ಟಡ ಬಳಹ ಹಳೆಯದಾಗಿದ್ದು, ಜೋರು ಮಳೆಗೆ ಕುಸಿದು ಬಿದ್ದಿದೆ.
೮ನೇ ತರಗತಿ ಕೊಠಡಿ ಬಿದ್ದಿದ್ದು, ವಿದ್ಯಾರ್ಥಿಗಳು ಪಾರಾಗಿದ್ದಾರೆ. ಆದರೆ ಕಟ್ಟಡದ ಸ್ಥಿತಿ ನೋಡಿ ಪೋಷಕರು ಆತಂಕದಲ್ಲಿದ್ದು,ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆದರುತ್ತಿದ್ದಾರೆ.
ಕಟ್ಟಡ ಕೆಲ ದಿನಗಳಿಂದ ಸೋರಿಕೆಯಾಗುತ್ತಿತ್ತು. ಮಳೆ ಮಾಮೂಲು ಎಂದು ಶಿಕ್ಷಕರು ಸುಮ್ಮನಾಗಿದ್ದರು. ಆದರೆ ಕಟ್ಟಡ ಬೀಳಬಹುದು ಎಂದು ಶಿಕ್ಷಕರು ಊಹಿಸಿರಲಿಲ್ಲ. ಆದರೂ ಮಕ್ಕಳನ್ನು ಕಟ್ಟಡದಿಂದ ಹೊರಕರೆತಂದಿದ್ದು, ಅದೃಷ್ಟವಶಾತ್ ಮಕ್ಕಳು ಪಾರಾಗಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.