ದಿಗಂತ ವರದಿ ಹಾಸನ:
ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಬೇಲೂರು ತಾಲೂಕಿನ ಕಳ್ಳೇರಿ ಗ್ರಾಮದಲ್ಲಿ ವಾಸದ ಮನೆ ಕುಸಿದು ಬಿದ್ದು ಮನೆಯಲ್ಲಿದ್ದ 7 ಜನರಿಗೆ ಗಾಯಗಳಾಗಿವೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗೋಡೆಗಳು ಶಿಥಿಲಗೊಂಡು ಮನೆ ಸಂಪೂರ್ಣವಾಗಿ ಕುಸಿದಿದೆ ಮನೆಯಲ್ಲಿದ್ದ ನಾಗೇಶ್, ಶಶಿಕಲಾ, ಗಾನವಿ, ಗಗನ್, ವೀಣಾ, ಅನಿಲ್, ಅಶ್ವಿನಿ, ಎಂಬುವವರಿಗೆ ಗಾಯಗಳಾಗಿವೆ.
ಗಾಯಾಳುಗಳಿಗೆ ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ವಾಸದ ಮನೆ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ ಸೂಕ್ತ ಪರಿಹಾರ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.