ಹೊಸದಿಗಂತ ವರದಿ,ಮಡಿಕೇರಿ :
ಕೊಡಗಿನ ತಲಕಾವೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು, ಕಾವೇರಿ ಹಾಗೂ ಕನ್ನಿಕೆ ನದಿಗಳು ಉಕ್ಕಿ ಹರಿಯುತ್ತಿವೆ. ಪರಿಣಾಮವಾಗಿ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ ಜಲಾವೃತಗೊಂಡಿದೆ.
ದೇವಾಲಯದ ಮೆಟ್ಟಲಿನವರೆಗೂ ನೀರು ಬಂದಿದ್ದು, ಹೊರ ಪ್ರದೇಶದ ಸಂಪರ್ಕ ಕಳೆದುಕೊಂಡಿದೆ.
ಭಾಗಮಂಡಲದ ಜನತೆಯ ಸಂಚಾರಕ್ಕಾಗಿ ಜಿಲ್ಲಾಡಳಿತ ಇದೀಗ ಬೋಟ್ ವ್ಯವಸ್ಥೆ ಕಲ್ಪಿಸಿದೆ