ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿಯೂ ಭಾರೀ ಮಳೆಯಾಗುತ್ತಿದ್ದು, ಈವರೆಗೂ ಮಳೆಗೆ ಸಂಬಂಧಿಸಿದ ಅವಗಢಗಳಿಂದ 86 ಮಂದಿ ಮೃತಪಟ್ಟಿದ್ದಾರೆ.
ಪಂಜಾಬ್‌ನಲ್ಲಿ ಅತಿ ಹೆಚ್ಚು ಅಂದರೆ 52 ಮಂದಿ ಮೃತಪಟ್ಟಿದ್ದಾರೆ, ಪಖ್ತುಂಖ್ವಾದಲ್ಲಿ 20 ಹಾಗೂ ಬಲೂಚಿಸ್ತಾನದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.
ಲಾಹೋರ್‌ನ ಅಜರ್ ಟೌನ್ ಬಳಿ ಸತತ ಮಳೆಯಿಂದಾಗಿ ಚಾವಣಿ ಕುಸಿದಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.