ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಕರಾವಳಿಯಲ್ಲಿ ಜುಲೈ 7ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿಮ ಗದಗ, ಬೀದರ್ನಲ್ಲಿ ಸಾಧಾರಣ ಮಳೆಯಾಗಲಿದೆ. ಕ್ಯಾಸಲ್ರಾಕ್, ಮೂಡುಬಿದಿರೆ, ಲೋಂಡಾ, ಉಡುಪಿ, ಕೋಟಾ, ಕಾರ್ಕಳ, ಮಂಗಳೂರು, ಆಗುಂಬೆ, ಶೃಂಗೇರಿ, ಬೆಳ್ತಂಗಡಿ, ಕದ್ರಾ, ಧರ್ಮಸ್ಥಳ, ಪಣಂಬೂರು, ಮಾಣಿ, ಬಂಟವಾಳ, ಕುಂದಾಪುರ, ಜೋಯ್ಡಾ, ಗೋಕರ್ಣ, ಖಾನಾಪುರ, ಮಂಕಿ, ಸುಳ್ಯ, ಕಳಸ, ಕೊಟ್ಟಿಗೆಹಾರ, ಕೊಪ್ಪ, ಭಾಗಮಂಡಲದಲ್ಲಿ ಮಳೆಯಾಗಿದೆ.