April 9, 2026
Thursday, April 9, 2026
spot_img

ವಿದ್ಯಾಕಾಶಿ ಧಾರವಾಡಲ್ಲಿ ಭಾರೀ ಮಳೆ: ಬಿಸಿಲ ಬೇಗೆಗೆ ತಂಪೆರೆದ ವರುಣ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾಕಾಶಿ ಧಾರವಾಡಲ್ಲಿ ಭಾರೀ ಮಳೆಯಾಗಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ಕೊಂಚ ಸಮಾಧಾನ ತಂದಿದೆ.

ಗುಡುಗು ಸಹಿತ ಮಳೆಯಿಂದ ಜನರ ಮೊಗದಲ್ಲಿ ಖುಷಿ ತಂದರೂ, ಗಾಳಿಯ ರಭಸಕ್ಕೆ ಮಾವಿನ ಬೆಳೆಗೆ ಈ ಮಳೆ ಕಂಟಕವಾಗಿದೆ.

ಅದ್ರ ಜೊತೆಗೆ ಧಾರವಾಡ ನಗರದ ಕರ್ನಾಟಕ ಕಾಲೇಜು(ಕೆಸಿಡಿ) ಮೈದಾನದಲ್ಲಿ ಆಯೋಜಿಸಿದ್ದ ಸಂಸದ ಮಹೋತ್ಸವದ ಕುಸ್ತಿ ಟೂರ್ನಿ ಮಳೆಯಿಂದಾಗಿ ಅರ್ಧಕ್ಕೆ ಸ್ಥಗಿತವಾಗಿದೆ.

ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಹಾಗೂ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ಶಾಸಕರು ಕೆಸಿಡಿ ಮೈದಾನಕ್ಕೆ ತೆರಳಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.‌ ಆದರೆ ಅಷ್ಟರಲ್ಲಾಗಲೇ ವಿಪರೀತ ಮಳೆ ಆರಂಭವಾಗಿದ್ದರಿಂದ ಪ್ರೇಕ್ಷಕರಾದಿಯಾಗಿ ಎಲ್ಲರೂ ಕ್ರೀಡಾಂಗಣ ಬಿಟ್ಟು ಹೊರ ನಡೆದರು.‌ ಹಾಗಾಗಿ ನಡೆಯಬೇಕಿದ್ದ ಕುಸ್ತಿ ಪಂದ್ಯಾವಳಿಗಳು ರದ್ದಾದವು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !