ಹೊಸದಿಗಂತ ವರದಿ ಯಾದಗಿರಿ:
ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮೃತಪಟ್ಡ ಘಟನೆ ಜಿಲ್ಲೆಯ ವಡಿಗೇರಾ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಮರಿಲಿಂಗಪ್ಪ ಕಲಾಲ (48) ಮೃತ ದುರ್ದೈವಿ ರೈತ. ಜಮೀನಿನಲ್ಲಿ ಕೆಲಸ ಮಾಡುವಾಗ ಪಂಪಸೆಟ್ ವಿದ್ಯುತ್ ತಂತಿ ಹರಿದ ಕಾರಣ ರೈತ ಸ್ಥಳದಲ್ಲೇ ಸಾವನಪ್ಪಿದ್ದಾನೆ. ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.