ಹೊಸದಿಗಂತ ವರದಿ ಯಲ್ಲಾಪುರ :
ಯಲ್ಲಾಪುರ ತಾಲೂಕಿನಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಪ್ರಸಿದ್ಧ ಸಾತೋಡ್ಡಿ ಜಲಪಾತ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಮಳೆಯಿಂದಾಗಿ ಜಲಪಾತವು ಭೋರ್ಗರೆಯುತ್ತಿದ್ದು, ಮಳೆಗಾಲದಲ್ಲಿ ಜಲಪಾತವನ್ನು ನೋಡಲು ಬೇರೆ ಬೇರೆ ಊರಿನಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಯಾವುದೇ ಅಹಿತಕರ ಘಟನೆ ಸಂಭಸಿದಂತೆ ಎಚ್ಚರ ವಹಿಸಿರುವ ಅರಣ್ಯ ಇಲಾಖೆ, ವಿಎಫ್‌ಸಿ ಹಾಗೂ ಪೊಲೀಸ್ ಇಲಾಖೆ ಮುಂದಿನ ಮಾಹಿತಿಯವರೆಗೆ ಸಾತೋಡ್ಡಿ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ.ಎಂದು ಬಿಸಗೋಡ ಕ್ರಾಸ ಬಳಿ ಬ್ಯಾನರ್ ಆಳವಡಿಸಿದ್ದಾರೆ.