ಹೊಸದಿಗಂತ ವರದಿ ಕೊಪ್ಪಳ:
ಗುರುವಾರ ರಾತ್ರಿ ಸುರಿದ ಮಳೆ ಹಾಗೂ ಸಿಡಿಲು ಬಡಿತಕ್ಕೆ ಕೊಪ್ಪಳ ನಗರದ ವಾರ್ಡ ನo 8 ರ ಕೋಟೆ /ಗೌರಿಅಂಗಳದ ಇಬ್ಬರು ನಿವಾಸಿಗಳು ಮೃತಪಟ್ಟಿದ್ದಾರೆ.
ಮಂಜುನಾಥ್ ರಾಮಲಿಂಗಪ್ಪ ಗಾಳಿ (48) ಹಾಗೂ ಗೋವಿಂದಪ್ಪ ತಂದೆ ಶಿವಪ್ಪ ಮ್ಯಾಗಲಮನಿ (62) ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಗುರುವಾರ ಸಂಜೆಯಿಂದ ಗಾಳಿ, ಸಿಡಿಲು ಹಾಗೂ ಅಬ್ವರದ ಮಳೆ ಬಂದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದು, ಸಿಡಿಲಬ್ಬರಕ್ಕೆ ಜನರು ಕಂಗಾಲಾಗಿದ್ದಾರೆ.