May 4, 2026
Monday, May 4, 2026
spot_img

ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಜೋರು ಗುಡುಗು ಸಹಿತ ಮಳೆ, ಇನ್ನೂ ಮೂರು ದಿನ ಅಲರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಳಗಿನ ಜಾವ ಸುರಿದ ಮಳೆ ಭೂಮಿಯನ್ನು ತಣ್ಣಗಾಗಿಸಿದೆ.

ಮೆಜೆಸ್ಟಿಕ್‌, ಕೆ.ಆರ್‌. ಮಾರುಕಟ್ಟೆ, ಶಾಂತಿನಗರ, ಯಲಹಂಕ, ಮಹಾಲಕ್ಷ್ಮಿ ಲೇ ಔಟ್‌, ನಂದಿನಿ ಲೇಔಟ್‌ ಹಾಗೂ ಇನ್ನಿತರ ನಗರಗಳಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆ ಬಿದ್ದಿದೆ.

ಕೆ.ಆರ್‌. ಮಾರ್ಕೆಟ್‌ನಲ್ಲಿ ಈ ಮಳೆಯಿಂದ ಮಾರಾಟಗಾರರಿಗೆ ಸಮಸ್ಯೆ ಉಂಟಾಗಿದೆ. ಬೆಳಗಿನ ವ್ಯಾಪಾರಕ್ಕೆ ಮಳೆಯಿಂದಾಗಿ ಅಡ್ಡಿಯುಂಟಾಗಿದೆ. ಇನ್ನೂ ಮೂರು ಬೆಂಗಳೂರಿನಲ್ಲಿ ಇದೇ ರೀತಿ ಮಳೆ ಬೀಳಲಿದೆ.

ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಮೂರು ದಿನಗಳ ಕಾಲ ಭಾರಿ ಮಳೆ ಬೀಳುತ್ತದೆ. ಅದರಲ್ಲಿಯೂ ರಾತ್ರಿಯ ಮಳೆ ಹೆಚ್ಚಾಗಿರುತ್ತದೆ ಎಂದು ಅಲರ್ಟ್‌ ಘೋಷಣೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !