ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು-ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್ ರಸ್ತೆಯ ಸಕಲೇಶಪುರ ತಾಲ್ಲೂಕಿನ ದೋಣಿಗಾಲ್ ಬಳಿ ಭೂಕುಸಿತ ಸಂಭವಿಸಿದೆ.
ಈ ಭಾಗದಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯ ಎರಡೂ ಭಾಗದಲ್ಲಿ ಮಣ್ಣನ್ನು ಬಗೆಯಲಾಗಿದೆ. ಇಲ್ಲಿ ತಡೆಗೋಡೆ ನಿರ್ಮಿಸಿದ್ದರೂ, ಭಾರೀ ಮಳೆ ಆರ್ಭಟಕ್ಕೆ ಮೇಲಿನಿಂದ ರಸ್ತೆಗೆ ಮಣ್ಣು ಕುಸಿಯುತ್ತಿದ್ದು, ಜೊತೆಗೆ ಮೇಲ್ಭಾಗ ಕೃಷಿಭೂಮಿಗಳಲ್ಲಿರುವ ಗಿಡಮರಗಳು ಕೂಡಾ ಮಣ್ಣಿನ ಸಮೇತ ನೆಲಕ್ಕುರುಳಿವೆ.