ಹೊಸದಿಗಂತ ವರದಿ, ಭಟ್ಕಳ:
ಕಳೆದ ನಾಲ್ಕೈದು ದಿನಗಳಿಂದ ತಣ್ಣಗಾಗಿದ್ದ ಮಳೆ ಮಂಗಳವಾರ ನಸುಕಿನಿಂದ ಮತ್ತೆ ಭೋರ್ಗರೆಯುತ್ತಿದ್ದು, ಭಟ್ಕಳದಲ್ಲಿ ಜನ ಜೀವನ ಅಕ್ಷರಶ: ನಲುಗಿ ಹೋಗಿದೆ.
ಒಂದೇ ಸಮನೆ ಸುರಿಯುತ್ತಿರುವ ಮಳೆಗೆ ಹಲವು ಬಡಾವಣೆಗಳು ಮುಳುಗಿವೆ ವಿ.ವಿ.ರಸ್ತೆ ಸೇರಿ ವಿವಿಧ ಕಡೆ ಮಳೆ ನೀರು ಮನೆಯೊಳಗೆ ನುಗ್ಗಿದೆ. ಹಲವಾರು ಮನೆಗಳು ಮುಳುಗಿ, ಸಾಮಾನು ಸರಂಜಾಮುಗಳು ನೀರಲ್ಲಿ ನಿಂತಿವೆ. ಕೆಲವರು ಮನೆಯ ಮಾಳಿಗೆ ಏರಿ ರಕ್ಷಣೆ ಪಡೆದರೆ, ಇನ್ನು ಕೆಲವರು ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗತೊಡಗಿದ್ದಾರೆ. ರಸ್ತೆ, ತೋಟಗಳೆಲ್ಲವೂ ನೀರಲ್ಲಿ ನಿಂತಿರುವುದರಿಂದ ಜನ ಕಂಗಾಲಾಗಿದ್ದಾರೆ.
ಹೆದ್ದಾರಿ ಅಕ್ಕ ಪಕ್ಕದ ಏರಿಯಾದಲ್ಲೇ ಅತಿ ಹೆಚ್ಚು ಅವಘಡ ಸಂಭವಿಸಿದ್ದು ಕೃತಕ ನೆರೆ ಸೃಷ್ಟಿ ಆಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ