ಹೊಸದಿಗಂತ ವರದಿ, ಮಂಗಳೂರು:
ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ರೆಡ್ ಅಲರ್ಟ್ ಜಾರಿಯಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲಾ ಕಾಲೇಜುಗಳು, ರಾಜ್ಯ ಪಠ್ಯಕ್ರಮ ಅನುಸರಿಸುವ ಶಾಲೆಗಳು, ಸಿ ಬಿ ಎಸ್ ಇ ಶಾಲೆಗಳು, ಐ ಸಿ ಎಸ್ ಸಿ ಶಾಲೆಗಳು, ಕೇಂದ್ರೀಯ ವಿದ್ಯಾಲಯಗಳು, ಅಂಗನವಾಡಿಗಳು ಮತ್ತು ಮದ್ರಸಾಗಳಿಗೆ ನಾಳೆ (ಶುಕ್ರವಾರ, ಆಗಸ್ಟ್ 2, 2024) ಜಿಲ್ಲಾಧಿಕಾರಿ ಕೆ. ಇಂಬಾ ಶೇಖರ್ ರಜೆ ಘೋಷಿಸಿದ್ದಾರೆ.
ಪೂರ್ವ ಘೋಷಿತ ಪರೀಕ್ಷೆಗಳಿಗೆ ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.