ಹೊಸದಿಗಂತ ವರದಿ, ಮಂಗಳೂರು:
ಕಾಸರಗೋಡು ಜಿಲ್ಲೆಯಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಭಾರೀ ಮಳೆಗೆ ತಗ್ಗುಪ್ರದೇಶಗಳು ಜಲಾವೃತವಾಗುತ್ತಿದ್ದರೆ, ನದಿಗಳ ನೀರಿನಮಟ್ಟ ಏರಿಕೆಯಾಗಿ ದಡದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಪುಣ್ಯ ಕ್ಷೇತ್ರ ಮಧೂರಿನಲ್ಲಿ ‘ಮಧುವಾಹಿನಿ’ ಉಕ್ಕಿ ಹರಿದು ದೇವಳದ ಅಂಗಣಕ್ಕೆ ನುಗ್ಗಿ ಪಾವನವಾಗಿದೆ.
ಭಕ್ತಾದಿಗಳು ದೇಗುಲದ ಅರ್ಚಕವಲಯ ಮಳೆ ನೀರಿನ ನಡುವೆಯೇ ಸೇವಾಕಾರ್ಯ ಪೂರೈಸುತ್ತಿದ್ದಾರೆ.