ಮುಂಬೈನಲ್ಲಿ ವರುಣನ ಅಬ್ಬರ: ಜನತೆ ತತ್ತರ, ಅಲ್ಲೋಲ-ಕಲ್ಲೋವಾದ ವಾಣಿಜ್ಯ ನಗರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಕಳೆದ 5 ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮುಂಬೈ ಜೊತೆಗೆ ಪುಣೆ ಮತ್ತು ನಾಗ್ಪುರದಲ್ಲೂ ಭಾರೀ ಮಳೆಯಾಗುತ್ತಿದೆ. ನಿನ್ನೆ ಸಂಜೆ 5.30 ರಿಂದ 8.30 ರ ನಡುವೆ ಮುಂಬೈನಲ್ಲಿ ಕೇವಲ 3 ಗಂಟೆಗಳಲ್ಲಿ ಹವಾಮಾನ ಇಲಾಖೆ ಪ್ರಕಾರ 8.30ರ ವೇಳೆಗೆ 11.5 ಸೆಂ.ಮೀ ಮಳೆಯಾಗಿದೆ. ಎಲ್ಲ ರಸ್ತೆಗಳು, ಕಾಲೋನಿಗಳು, ಬೀದಿಗಳು ಮಳೆನೀರಿನಿಂದ ತುಂಬಿ ಹೋಗಿವೆ.  ಜಲಾವೃತವಾಗಿವೆ.

ಮುಂಬೈ ಸಮುದ್ರ ಮಟ್ಟಕ್ಕೆ ಸಮಾನಾಂತರವಾಗಿದೆ. ಜೊತೆಗೆ ಈ ಭಾರಿ ಮಳೆ ಮುಂಬೈಯನ್ನು ಮುಳುಗಿಸುತ್ತಿದೆ. ಮುಂಬೈ ಮಹಾನಗರದಲ್ಲಿ ಬಡವರು, ಕಾರ್ಮಿಕರು ಮತ್ತು ವಲಸೆ ಕಾರ್ಮಿಕರಿದ್ದಾರೆ. ಇತರೆ ರಾಜ್ಯಗಳಿಂದ ಬಂದು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಅನೇಕ ಜನರಿದ್ದಾರೆ. ಈ ಭಾರಿ ಮಳೆಯಿಂದ ನರಕಯಾತನೆ ಅನುಭವಿಸುವಂತಾಗಿದೆ.

ಹಲವೆಡೆ ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಅನೇಕ ಮರಗಳು ಕೂಡ ನೆಲಕ್ಕುರುಳಿವೆ. ಮರಗಳ ಕೆಲಗೆ ನಿಲ್ಲಿಸಿರುವ ವಾಹನಗಳು ಜಖಂ ಆಗಿವೆ. ರಸ್ತೆಗಳೆಲ್ಲಾ ಜಲಾವೃತವಾಗಿರುವುದು ಕಂಡುಬಂತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!